ಲೋಕಬಂಧು ನ್ಯೂಸ್ ನವದೆಹಲಿ, ಜು.15
ಕರ್ನಾಟಕ, ದೆಹಲಿ, ಪಂಜಾಬ್ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಕೆಲವು ದಿನಗಳ ವರೆಗೆ ವಿಸ್ತರಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.ಆ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಫಾರ್ಮ್ (ನಮೂನೆ) ಹಿಂದಿರುಗಿಸುವ ಅವಧಿ ವಿಸ್ತರಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಜುಲೈ 29ರ ವರೆಗೆ ಬಿಲ್ಓಗಳಿಗೆ ಎಸ್‌ಐಆರ್ ನಮೂನೆ ನೀಡಿ, ಮರಳಿ ಪಡೆಯಲು ಸಮಯ ನಿಗದಿಯಾಗಿತ್ತು. ಇದೀಗ ಆಗಸ್ಟ್ 8ರ ಅವಧಿ ವಿಸ್ತರಿಸಲಾಗಿದೆ.
ಬಿಎಲ್‌ಒಗಳು ಮನೆ- ಮನೆಗೆ ತೆರಳಿ ನಮೂನೆ ಸಂಗ್ರಹಿಸಲು ಆ.8ರ ವರೆಗೆ ಅವಕಾಶ ನೀಡಿ ಚುನಾವಣಾ ಆಯೋಗ ಆದೇಶಿಸಿದೆ.