ಲೋಕಬಂಧು ನ್ಯೂಸ್ ಉಡುಪಿ, ಜು.15
ಇನ್ನರ್ ವ್ಹೀಲ್ ಕ್ಲಬ್ ಆಫ್ ಉಡುಪಿಯ 2026–27ನೇ ಸಾಲಿನ ಪದಗ್ರಹಣ ಸಮಾರಂಭ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.ಕ್ಲಬ್‌ನ ಮಾಜಿ ಅಧ್ಯಕ್ಷೆ ಶುಭಾ ಬಾಸ್ರಿ ಮುಖ್ಯ ಅತಿಥಿಯಾಗಿದ್ದರು.
ಸರಿತಾ ವಿ.ಕೆ. ಅಧ್ಯಕ್ಷೆ, ಶಾಲಿನಿ ರಾಘವೇಂದ್ರ ನಿಕಟಪೂರ್ವ ಅಧ್ಯಕ್ಷೆ (ಐಪಿಪಿ), ರಾಜಲಕ್ಷ್ಮಿ ಡಿ. ಶೆಟ್ಟಿ ಉಪಾಧ್ಯಕ್ಷೆ, ವಾಣಿ ಜೆ. ಪ್ರಭು, ಕಾರ್ಯದರ್ಶಿ, ವೈಷ್ಣವಿ ಆಚಾರ್ಯ ಖಜಾಂಚಿ, ಮಾಲತಿ ಅಮೀನ್ ಸಂಪಾದಕಿ ಹಾಗೂ ಪ್ರೇಮಾ ಜಗದೀಶ್ ಅಂತರರಾಷ್ಟ್ರೀಯ ಸೇವಾ ಸಂಘಟಕಿ (ಐಎಸ್ಓ) ಅಧಿಕಾರ ಸ್ವೀಕರಿಸಿದರು.