ಲೋಕಬಂಧು ನ್ಯೂಸ್ ಬೆಂಗಳೂರು, ಜು.7
ಆರ್.ಎಸ್.ಎಸ್. ಸ್ವಯಂಸೇವಕರೊಬ್ಬರು ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ದೂರನ್ನು ಪರಿಗಣಿಸಿದ ವಿಶೇಷ ನ್ಯಾಯಾಧೀಶ ಸಂದೀಪ್ ಪಾಟೀಲ್ ಅವರು, ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿದ್ದ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ಗೆ ಲೀಗಲ್ ನೋಟಿಸ್ ನೀಡಿದ್ದಾರೆ.
ಚುನಾವಣಾ ಬಿಜೆಪಿ ಉಸ್ತುವಾರಿ ರಾಮ್ ಮಾಧವ್ ಅವರು, ಪಾಕ್ ಅಧಿಕಾರಿಗಳ ಜೊತೆ ಗೌಪ್ಯಸಭೆ ನಡೆಸಿದ್ದಾರೆ ಎಂದು ಬಿಕೆ ಹರಿಪ್ರಸಾದ್ ಆರೋಪಿಸಿದ್ದರು.
ಬಿ.ಕೆ. ಹರಿಪ್ರಸಾದ್ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿಗರು ಕೋರ್ಟ್ ಮೆಟ್ಟಿಲೇರಿದ್ದರು. ರಾಮ್ ಮಾಧವ್ ಹೆಸರಿಗೆ ಕಪ್ಪು ಮಸಿ ಬಳಿಯಲು ಪ್ರಯತ್ನಿಸಿರುವುದಲ್ಲದೆ ಅವರ ಇಮೇಜ್ ಮತ್ತು ಖ್ಯಾತಿಯನ್ನು ಕುಗ್ಗಿಸಲು ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ಬಿಎನ್ಎಸ್ ನೋಟಿಸ್ ನೀಡಲಾಗಿದೆ. ಹರಿಪ್ರಸಾದ್ ಅವರು, ರಾಮ್ ಮಾಧವ್ ಕ್ಷಮೆ ಕೇಳಬೇಕೆಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಹಿಲ್ಟನ್ ಹೋಟೆಲ್ನಲ್ಲಿ ಪಾಕ್ ಐಎಸ್ಐ ಮಾಜಿ ಮೇಜರ್ ಜನರಲ್ ಜೊತೆ ರಾಮ್ ಮಾಧವ್ ರಹಸ್ಯ ಮೀಟಿಂಗ್ ನಡೆಸಿದ್ದು, ಗೌಪ್ಯ ಸಭೆಯಲ್ಲಿ ಏನು ಮಾತಾಡಿದ್ದಾರೆ ಎಂದು ಸ್ಪಷ್ಟಪಡಿಸಬೇಕು. ಅಲ್ಲದೆ ಕೊಲಂಬೋ ಹಾಗೂ ಲಂಡನ್ನಲ್ಲೂ 4 ಸಭೆಗಳನ್ನು ಮಾಡಿದ್ದಾರೆ. ವಿದೇಶಿ ವ್ಯವಹಾರಗಳನ್ನು ವಿದೇಶಾಂಗ ಸಚಿವಾಲಯ ನೋಡಿಕೊಳ್ಳುತ್ತದೆ. ಆದರೆ, ರಹಸ್ಯ ಸಭೆ ನಡೆಸಲು ನಿಮಗೆ ಯಾರು ಅಧಿಕಾರ ಕೊಟ್ಟಿದ್ದಾರೆ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದರು.