ಪರಶುರಾಮ ಮೂರ್ತಿಗೆ ಶಾಸಕ ಸುನಿಲ್‌ ಕುಮಾರ್ ಚಿತ್ರ ಬಳಸಿ ವಿಕೃತಿ: ವ್ಯಕ್ತಿಯ ವಿಚಾರಣೆ

ಲೋಕಬಂಧು ನ್ಯೂಸ್ ಉಡುಪಿ, ಜು.6
ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಭಾವಚಿತ್ರ ಹಾಗೂ ಪರಶುರಾಮ ಮೂರ್ತಿಯನ್ನು ಅವಹೇಳನಕಾರಿಯಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಸೋಮವಾರ ಉಡುಪಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಉದ್ಯಾವರ ನಿವಾಸಿ ಗುರುಪ್ರಸಾದ್ ಎಂಬಾತನನ್ನು ನಗರದ ಎಂಜಿಎಂ ಕಾಲೇಜು ಸಮೀಪ ವಶಕ್ಕೆ ಪಡೆದ ಪೊಲೀಸರು, ಬಳಿಕ ನೋಟೀಸ್ ನೀಡಿ ಬಿಡುಗಡೆಗೊಳಿಸಿದ್ದಾರೆ.


ಶಾಸಕ ಸುನಿಲ್ ಕುಮಾರ್ ಅವರ ಭಾವಚಿತ್ರವನ್ನು ಪರಶುರಾಮ ಮೂರ್ತಿಯ ಚಿತ್ರದೊಂದಿಗೆ ಮರ್ಜ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ ಎಂದು ಸುಮಂತ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.