ಲೋಕಬಂಧು ನ್ಯೂಸ್ ಬೆಂಗಳೂರು, ಜು.15
ಕರ್ನಾಟಕದಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (ಎಐ) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.
ಇಲ್ಲಿನ ಬಿಐಇಸಿನಲ್ಲಿ ನಡೆದ 'ಗೂಗಲ್ 3/4 2026' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಗಳ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ವಿಶೇಷ 'ಎಐ ಹಬ್'ನ್ನು ಇನ್‌ಕ್ಯುಬೇಶನ್ ಕೇಂದ್ರವಾಗಿ ಸ್ಥಾಪಿಸಲಾಗುವುದು ಎಂದವರು ತಿಳಿಸಿದರು
ಜಾಗತಿಕ ಮಟ್ಟದ ಎಐ ಪ್ರತಿಭೆಗಳನ್ನು ರೂಪಿಸಲು, ಸುಧಾರಿತ ಸಂಶೋಧನೆಗಳನ್ನು ಉತ್ತೇಜಿಸಲು ಮತ್ತು ಶಿಕ್ಷಣ ಸಂಸ್ಥೆಗಳು, ಉದ್ಯಮ ಹಾಗೂ ಸರ್ಕಾರದ ನಡುವೆ ಪ್ರಬಲ ಸಮನ್ವಯ ಸಾಧಿಸಲು ಎಐ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದರು.
ಎಐ ಹಬ್
ನವೋದ್ಯಮ (ಸ್ಟಾರ್ಟ್ಅಪ್)ಗಳು, ತಂತ್ರಜ್ಞಾನ ಕಂಪನಿಗಳು ಮತ್ತು ಸಂಶೋಧಕರಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ಕೈಗೊಳ್ಳಲು ಇದು ಅತ್ಯಾಧುನಿಕ ಇನ್‌ಕ್ಯುಬೇಶನ್ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ತಂತ್ರಜ್ಞಾನವನ್ನು ಕೇವಲ ಘೋಷಣೆಯಾಗಿ ಉಳಿಸದೆ ಆಡಳಿತ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಂಡು ಕರ್ನಾಟಕವನ್ನು ಕೃತಕ ಬುದ್ಧಿಮತ್ತೆ ಆಧಾರಿತ ರಾಜ್ಯವನ್ನಾಗಿ ಮಾಡುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.
ಶಿಕ್ಷಕರಿಗೆ ಹೆಚ್ಚು ಪರಿಣಾಮಕಾರಿಯಾಗಿ ಬೋಧಿಸಲು ಎಐ ಆಧಾರಿತ ಸಹಾಯಕ ಪರಿಕರಗಳ ಬಳಕೆ, ಕಾಯಿಲೆಗಳ ಆರಂಭಿಕ ಪತ್ತೆ ಮತ್ತು ಸುಧಾರಿತ ವೈದ್ಯಕೀಯ ಚಿಕಿತ್ಸಾ ಬೆಂಬಲ, ರೈತರಿಗೆ ನೈಜ ಸಮಯದ ನಿಖರ ಹವಾಮಾನ ಮಾಹಿತಿ ನೀಡಿಕೆ, ನಾಗರಿಕರಿಗೆ ಸರ್ಕಾರದ ಸೇವೆಗಳನ್ನು ಅತ್ಯಂತ ವೇಗವಾಗಿ ಮತ್ತು ಗೌರವಯುತವಾಗಿ ತಲುಪಿಸುವುದು, ಸ್ಥಳೀಯ ಸಣ್ಣ ಉದ್ಯಮಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಎಐ ತಂತ್ರಜ್ಞಾನದ ನೆರವು ಇದರ ಉದ್ದೇಶ ಎಂದರು.
ಗೂಗಲ್ ಜೊತೆ ಪಾಲುದಾರಿಕೆಗೆ
ಕಳೆದ ಎರಡು ದಶಕಗಳಿಂದ ಬೆಂಗಳೂರಿನಲ್ಲಿ ಗೂಗಲ್ ಸಂಸ್ಥೆಯ ಕೊಡುಗೆಯನ್ನು ಶ್ಲಾಘಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅವರು, ಮುಖ್ಯವಾಗಿ 5 ಪ್ರಮುಖ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಗೂಗಲ್ ಸಂಸ್ಥೆಗೆ ಆಹ್ವಾನ ನೀಡಿದರು.