ಲೋಕಬಂಧು ನ್ಯೂಸ್ | ಉಡುಪಿ, ಜು.17
ಸಾಮಾನ್ಯ ಕುಟುಂಬದ ಹಿನ್ನೆಲೆಯ ಉಡುಪಿಯ ಸ್ಫೂರ್ತಿ ಶೆಟ್ಟಿ ಅವರು ವರ್ಲ್ಡ್ ಕಾರ್ಡ್ ಎಂಟ್ರಿ ಮೂಲಕ ಮಿಸ್ ಯುನಿವರ್ಸ್ ಇಂಡಿಯಾ ಸ್ಪರ್ಧೆಗೆ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲೇ ಹುಟ್ಟಿ ಬಳಿದು, ಇಲ್ಲೇ ಶಿಕ್ಷಣ ಪೂರೈಸಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿರುವ ಚೆಲುವೆ ಸ್ಫೂರ್ತಿ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, 16ನೇ ವಯಸ್ಸಿನಲ್ಲೇ ಸೌಂದರ್ಯ ಸ್ಪರ್ಧಾ ಲೋಕಕ್ಕೆ ಕಾಲಿಟ್ಟಿದ್ದು, 2018ರಿಂದ ಹಲವು ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. 2020ರಲ್ಲಿ ಕ್ಲೀನ್ ಆಫ್ ಕರ್ನಾಟಕ ಕಿರೀಟ ಪಡೆದಿದ್ದು, 2021ರಲ್ಲಿ ಮಿಸ್ ಇಂಟರ್ ನ್ಯಾಷನಲ್ ಯುನಿವರ್ಸ್'ನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದೆ.
2024ರಲ್ಲಿ ಮಿಸ್ ಗ್ರಾಂಡ್ ಇಂಡಿಯಾ ಸ್ಪರ್ಧೆಯಲ್ಲಿ ಟಾಪ್ 11ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು, 2025ರಲ್ಲಿ ಮಿಸ್ ಯುನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದಿರುವುದಾಗಿ ತಿಳಿಸಿದರು.
ಜು.18ರಿಂದ ಆ.23ರ ವರೆಗೆ ನಡೆಯಲಿರುವ ಮಿಸ್ ಯುನಿವರ್ಸ್ ಇಂಡಿಯಾ ಸ್ಪರ್ಧೆಗೆ ವರ್ಲ್ಡ್ ಕಾರ್ಡ್ ಎಂಟ್ರಿ ಮೂಲಕ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದು, ಟಾಪ್ 50ರಲ್ಲಿ ಸ್ಥಾನ ಪಡೆದಿರುವುದಾಗಿ ತಿಳಿಸಿದರು.
ಅಂತಿಮ ಸ್ಪರ್ಧೆ ಆ.23ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ ಎಂದರು.
