ಲೋಕಬಂಧು ನ್ಯೂಸ್ | ಉಡುಪಿ, ಜು.5
ಕುಂಜಿಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಶ್ರೀ ಬಬ್ಬುಸ್ವಾಮಿ ತನ್ನಿಮಾನಿಗ ಮತ್ತು ಪರಿವಾರ ದೈವಗಳು ಹಾಗೂ ಶ್ರೀ ಚಾಮುಂಡಿ ದೇವಿಯ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಸಲು ಮಾರ್ಗದರ್ಶನ ನೀಡಿದ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಹಾಗೂ ಧಾರ್ಮಿಕ ವಿಧಿ-ವಿಧಾನಗಳ ಪೌರೋಹಿತ್ಯ ವಹಿಸಿದ ವಿಖ್ಯಾತ್ ಭಟ್ ಅವರನ್ನು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಪ್ರಮುಖರು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಜೀರ್ಣೋದ್ಧಾರಕ್ಕೆ ಮುಂದಾದರೂ ಕಾರಣಾಂತರಗಳಿಂದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನೆರವೇರದೇ ದೈವಸ್ಥಾನಕ್ಕೆ ಸಂಬಂಧಪಟ್ಟವರು ದೈವ-ದೇವರಲ್ಲಿ ಹಾಗೂ ಜಿಲ್ಲೆಯ ಪ್ರಮುಖ ಜೋತಿಷ್ಯರು, ಧಾರ್ಮಿಕ ತಜ್ಞರ ಹೆಸರು ಸೂಚಿಸಿ ಪ್ರಾರ್ಥಿಸಿದರೂ ಒಪ್ಪಿಗೆ ದೊರಕಿರಲಿಲ್ಲ. ಅಂತಿಮವಾಗಿ ಶ್ರೀ ರಮಾನಂದ ಗುರೂಜಿ ಮೂಲಕ ವ್ಯವಸ್ಥಿತವಾಗಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಂಜನ್ ಕೆ., ಪ್ರಧಾನ ಕಾರ್ಯದರ್ಶಿ ಗಿರೀಶ್ ಎಂ. ಅಂಚನ್, ಕೋಶಾಧಿಕಾರಿ ಸೀತಾರಾಮ ಎಂ., ಜೊತೆ ಕೋಶಾಧಿಕಾರಿ ಸತೀಶ ಭಾಗವತ್, ಹಂಚಿನ ಮನೆತನದ ಸದಾಶಿವ ಶೆಟ್ಟಿ ಮತ್ತು ರತ್ನಾಕರ ಶೆಟ್ಟಿ, ಓಕುಡೆ ಮನೆತನದ ಅರವಿಂದ ಓಕುಡೆ ಮತ್ತು ಡಾ.ಅಶೋಕ ಕುಮಾರ್ ಓಕುಡೆ, ಶಶಿರಾಜ ಕುಂದರ್, ಪ್ರಶಾಂತ ಪಾತ್ರಿ, ಅಶೋಕ ಪಾತ್ರಿ, ದೈವಸ್ಥಾನದ ಮುಕ್ಕಾಲ್ದಿ ಶೇಷು, ದೊಡ್ಡಣಗುಡ್ಡೆ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್, ಉದ್ಯಮಿಗಳಾದ ದೀಪಕ್ ಕುಮಾರ್ ಬನ್ನಂಜೆ, ಆನಂದ ಬಾಯರಿ, ಗೋಪಾಲ ಶೆಟ್ಟಿಗಾರ್, ಲಕ್ಷ್ಮಣ ಕಾಮತ್, ಗಣೇಶ ಶೇರಿಗಾರ್ ಮೊದಲಾದವರಿದ್ದರು.
