ಜು.12ರಂದು `ಉಡುಪಿ ವಿಷನ್' ಸಭೆ

ಲೋಕಬಂಧು ನ್ಯೂಸ್ | ಉಡುಪಿ, ಜು.6
ಹತ್ತು ವರ್ಷಗಳ ಅವಧಿಗೆ ಉಡುಪಿಯ ಸಮಗ್ರ ಅಭಿವೃದ್ಧಿಯ ನೀಲನಕಾಶೆ ತಯಾರಿಸಲು ಜುಲೈ 12ರಂದು ಸಂಜೆ 5.30ಕ್ಕೆ ನಗರದ ಹೋಟೆಲ್ ಕಿದಿಯೂರಿನ ಶೇಷಶಯನ ಹಾಲ್‌ನಲ್ಲಿ 'ಉಡುಪಿ ವಿಷನ್-2035 ಸಭೆ ಕರೆಯಲಾಗಿದೆ ಎಂದು ಉಡುಪಿ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಉಡುಪಿಯ ಅಭಿವೃದ್ಧಿ ಹೇಗಿರಬೇಕೆಂದು ಆಯಾ ಕ್ಷೇತ್ರಗಳ ಪರಿಣಿತರು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ ಎಂದರು.


ಉಡುಪಿ ಛೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಡಾ.ವಿಜಯೇಂದ್ರ ವಸಂತ್ ಮಾತನಾಡಿ, ಛೇಂಬರ್ ಆಫ್ ಕಾಮರ್ಸ್'ನೊಂದಿಗೆ ಸಿವಿಲ್ ಎಂಜಿನಿಯರ್ಸ್, ಸಿಎ, ಜುವೆಲ್ಲ್ಸ್, ಬಿಲ್ಡರ್ಸ್ ಸೇರಿದಂತೆ ಹಲವು ಸಂಘಟನೆಗಳು ಕೈಜೋಡಿಸಲಿವೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಛೇಂಬರ್ ಉಪಾಧ್ಯಕ್ಷ ಪಿ.ನಟರಾಜ ಪ್ರಭು, ಅನಿಶ್ ಪೈ, ಸಿವಿಲ್ ಎಂಜಿನಿಯರ್ಸ್ ಸಂಘದ ಭಗವಾನ್ ದಾಸ್, ನಿರಂಜನ ಕುಮಾರ್ ಇದ್ದರು.