ಮಹಿಳೆ ನೇಣಿಗೆ ಶರಣು

ಲೋಕಬಂಧು ನ್ಯೂಸ್ ಮೂಡುಬಿದಿರೆ, ಜು.17
ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಪ್ಪದಕುಮೇರಿನಲ್ಲಿ ಮಹಿಳೆಯೋರ್ವರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.ಮಿಜಾರು ಸಮೀಪದ ನಮೈಲೆ ಪ್ರದೇಶದ ಅರ್ಚಕ ಗುರುರಾಜ ಭಟ್ ಅವರ ಪತ್ನಿ ಸ್ನೇಹಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.


ಸ್ನೇಹಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.


ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಹಿಂದೆ ಅವರ ದಾಂಪತ್ಯ‌ಜೀವನದಲ್ಲಿ ಬಿರುಕುಂಟಾಗಿತ್ತು ಎನ್ನಲಾಗಿದೆ.


ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.