ಲೋಕಬಂಧು ನ್ಯೂಸ್ | ಪಡುಬಿದ್ರಿ, ಆ.2
ಉಚ್ಚಿಲದ ದ.ಕ. ಮೊಗವೀರ ಮಹಾಜನ ಸಂಘ ಆಶ್ರಯದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದಲ್ಲಿ ನಡೆಯುವ 5ನೇ ವರ್ಷದ `ಉಡುಪಿ ಉಚ್ಚಿಲ ದಸರಾ' ಮಹೋತ್ಸವದ ಪೂರ್ವಭಾವಿ ಸಭೆ ಆಗಸ್ಟ್ 8ರಂದು ಅಪರಾಹ್ನ 3.30 ಗಂಟೆಗೆ ಉಚ್ಚಿಲ ಮೊಗವೀರ ಭವನದಲ್ಲಿ ನಡೆಯಲಿದೆ.
ಈ ಬಾರಿಯ ಪಂಚಮ ವರ್ಷದ `ಉಡುಪಿ ಉಚ್ಚಿಲ ದಸರಾ' ಉತ್ಸವ ಅಕ್ಟೋಬರ್ 11ರಿಂದ 21ರ ವರೆಗೆ 11 ದಿನಗಳ ಕಾಲ ನಡೆಯಲಿದ್ದು ಮಹೋತ್ಸವದ ರೂಪುರೇಷೆ, ಕಾರ್ಯಕ್ರಮ ಹಾಗೂ ಇನ್ನಿತರ ವ್ಯವಸ್ಥಾಪನ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.
ಭಕ್ತರು, ಸಮಿತಿಯ ಸರ್ವ ಸದಸ್ಯರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮೀನುಗಾರಿಕಾ ಸಂಘಟನೆಗಳು, ಮಹಿಳಾ ಸಂಘಟನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ದ.ಕ. ಮೊಗವೀರ ಮಹಾಜನ ಸಂಘ, ದಸರಾ ಉತ್ಸವ ಸಮಿತಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಪ್ರಕಟಣೆ ತಿಳಿಸಿದೆ.
