ಸಂಸತ್ತಿನಲ್ಲಿ ಸಂತರ ಅವಹೇಳನ ಖಂಡನೀಯ

ಲೋಕಬಂಧು ನ್ಯೂಸ್ | ನವದೆಹಲಿ, ಆ.1
ಅಯೋಧ್ಯೆ ಶ್ರೀರಾಮ ಮಂದಿರದ ಹುಂಡಿ ಹಣ ಲೂಟಿ ಪ್ರಕರಣವನ್ನು ಮುಂದಿಟ್ಟುಕೊಂಡು ದೇಶದ ಸಂಸತ್ತಿನ ಅಂಗಣದಲ್ಲಿ ಶುಕ್ರವಾರ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದ ಪಪ್ಪು ಯಾದವ್ ಸೇರಿದಂತೆ ಕೆಲವು ಸಂಸದರು ಖಾವಿ ತೊಟ್ಟು ಸಂತರನ್ನು ಅವಹೇಳನ ಮಾಡಲಾಗಿದೆ ಎಂದು ಶನಿವಾರ ಸಂತರು ಪ್ರತಿಭಟನೆ ನಡೆಸಿದರು.
ವಿಶ್ವ ಹಿಂದೂ ಪರಿಷತ್ ದೆಹಲಿ ರಾಜ್ಯ ಘಟಕ ಮತ್ತು ದೆಹಲಿ ಸಂತ ಮಹಾಮಂಡಲ ವತಿಯಿಂದ ಇಲ್ಲಿನ ಜಂತರ್ ಮಂತರ್'ನಲ್ಲಿ ನಡೆದ ಪ್ರತಿಭಟನೆ ನಡೆಯಿತು.
ನವದೆಹಲಿಯಲ್ಲಿ ಚಾತುರ್ಮಾಸ್ಯ ವ್ರತನಿಷ್ಠರಾದ ವಿಹಿಂಪ ಕೇಂದ್ರೀಯ ಮಾರ್ಗದರ್ಶಕ ಮಂಡಳಿ ಸದಸ್ಯರೂ ಆಗಿರುವ ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಹಿತ ಅನೇಕ ಸಂತರು, ನೂರಾರು ಹಿಂದೂ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸದ್ಬುದ್ಧಿ ಹೋಮ ಆಯೋಜಿಸಲಾಯಿತು.