ಲೋಕಬಂಧು ನ್ಯೂಸ್ ಉಡುಪಿ, ಆ.14
80ನೇ ಸ್ವಾತಂತ್ರೋತ್ಸವ ಪ್ರಯುಕ್ತ ನ್ಯೂ ಫ್ರೆಂಡ್ಸ್ ಕಪ್ಪೆಟ್ಟು ತಂಡ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಲಾಕೃತಿ ಹಾಗೂ ಪುರಾತನ ಸಂಸತ್ ಭವನದ ಸುಂದರ ಮಾದರಿಯನ್ನು ಕಪ್ಪೆಟ್ಟುವಿನಲ್ಲಿ ನಿರ್ಮಿಸಲಾಗಿದೆ.ಸ್ವಾತಂತ್ರೋತ್ಸವದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸುವ ಉದ್ದೇಶದಿಂದ ತಂಡದ ಸದಸ್ಯರು ಒಗ್ಗೂಡಿ ಈ ಕಲಾಕೃತಿಯನ್ನು ನಿರ್ಮಿಸಿದ್ದು, ನೋಡುಗರ ಗಮನ ಸೆಳೆಯುತ್ತಿದೆ.
ದೇಶದ ಸಂವಿಧಾನ ನಿರ್ಮಾಣದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸುವ ಜೊತೆಗೆ ಪ್ರಜಾಪ್ರಭುತ್ವದ ಸಂಕೇತವಾಗಿರುವ ಸಂಸತ್ ಭವನದ ಮಹತ್ವವನ್ನು ಸಾರುವ ರೀತಿಯಲ್ಲಿ ಕಲಾಕೃತಿಯನ್ನು ಸಿದ್ಧಪಡಿಸಲಾಗಿದೆ.
ತಂಡದ ಸದಸ್ಯರಾದ ಸುಧಾಕರ್, ದಯಾನಂದ್, ಹರೀಶ್, ಬಾಲು, ಪ್ರಮೋದ್, ಪ್ರಸಾದ್, ಸುರೇಶ್, ಶಶಾಂಕ್, ಕುಮಾರ್, ಸಂಪ್ರೀತ್, ನಿಹಾಲ್ ಹಾಗೂ ಸೃಜನ್ ಆಸಕ್ತಿ ಮತ್ತು ಪರಿಶ್ರಮದಿಂದ ಅಚ್ಚುಕಟ್ಟಾಗಿ ಕಲಾಕೃತಿಯನ್ನು ನಿರ್ಮಿಸಿದ್ದಾರೆ.
ದೇಶಭಕ್ತಿ, ಸಂವಿಧಾನದ ಮೌಲ್ಯಗಳು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ನ್ಯೂ ಫ್ರೆಂಡ್ಸ್ ಕಪ್ಪೆಟ್ಟು ತಂಡದ ಈ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ.ವಸ್ವಾತಂತ್ರ್ಯೋತ್ಸವ ಅಂಗವಾಗಿ ನಿರ್ಮಿಸಿರುವ ಈ ಕಲಾಕೃತಿ ಸ್ಥಳೀಯರಲ್ಲಿ ದೇಶಾಭಿಮಾನ ಮತ್ತು ಸಂವಿಧಾನದ ಬಗ್ಗೆ ಗೌರವ ಮೂಡಿಸುವಂತಿದೆ.