ಲೋಕಬಂಧು ನ್ಯೂಸ್ | ಕಾಪು, ಆ.15
ಮುದರಂಗಡಿ ಉದ್ಯಮಿ ಡೇವಿಡ್ ಡಿ'ಸೋಜಾ ಶೂಟೌಟ್ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಎರ್ಮಾಳ್ ನಿವಾಸಿ ಕಿಶೋರ್ ಪೂಜಾರಿ (47) ಹಾಗೂ ಕುತ್ಯಾರು ನಿವಾಸಿ ಸದಾನಂದ ದೇವಾಡಿಗ (45) ಬಂಧಿತರು. ಆರೋಪಿಗಳಾದ ಕಿಶೋರ್ ಪೂಜಾರಿ ಹಣವನ್ನು ಸದಾನಂದನಿಗೆ ವರ್ಗಾವಣೆ ಮಾಡಿದ್ದು, ಸದಾನಂದ ಅದನ್ನು ಮೂವರು ಸುಪಾರಿ ಕೊಲೆಗಾರರಿಗೆ ವರ್ಗಾಯಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈವರೆಗೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
