ಲೋಕಬಂಧು ನ್ಯೂಸ್ | ಉಜಿರೆ, ಆ.20
ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ತೆಂಗಿನ ಎಣ್ಣೆ ಮತ್ತು ಪಡಿಕಾಳು ವಿತರಿಸಲಾಯಿತು.
ಧರ್ಮಸ್ಥಳದಲ್ಲಿ ಸಂಪ್ರದಾಯದಂತೆ ಸಿಂಹ ಸಂಕ್ರಮಣ (ಸೋಣ ಸಂಕ್ರಾಂತಿ)ದಂದು ಆ.15 ರಂದು ಶನಿವಾರ ತೆಂಗಿನ ಎಣ್ಣೆ ಮತ್ತು ಪಡಿಕಾಳು ವಿತರಿಸಲಾಯಿತು.
ಒಟ್ಟು ಬೆಳ್ತಿಗೆ ಅಕ್ಕಿ 14,278 ಕೆ.ಜಿ., ಪಡಿಕಾಳು 2,855 ಕೆ.ಜಿ., ಮೆಣಸು 1,142 ಕೆ.ಜಿ., ಉಪ್ಪು 2,855 ಕೆ.ಜಿ. ಮತ್ತು ತೆಂಗಿನ ಎಣ್ಣೆ 4,459 ಲೀ. ಪಡಿಕಾಳು ವಿತರಿಸಲಾಯಿತು.