ವಿಧಾನಸಭೆಯ ನೂತನ ಸ್ಪೀಕರ್ ಜಿ.ಎಸ್ ಪಾಟೀಲ್‌ ಅವಿರೋಧ ಆಯ್ಕೆ

ಲೋಕಬಂಧು ನ್ಯೂಸ್ ಬೆಂಗಳೂರು, ಆ.14
ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್. ಪಾಟೀಲ್ ಸರ್ವಾನುಮತನದಿಂದ ಆಯ್ಕೆಯಾಗಿದ್ದಾರೆ.ಸ್ಪೀಕ‌ರ್ ಆಯ್ಕೆ ಬಗ್ಗೆ ಶುಕ್ರವಾರ ಸದನದಲ್ಲಿ ಹಂಗಾಮಿ ಸ್ಪೀಕರ್ ಜಯಚಂದ್ರ ರೂಲಿಂಗ್ ಕೊಟ್ಟರು. ನಂತರ ಸಿಎಂ ಡಿ.ಕೆ. ಶಿವಕುಮಾರ್ ಸ್ಪೀಕ‌ರ್ ಸ್ಥಾನಕ್ಕೆ ಜಿ.ಎಸ್. ಪಾಟೀಲ್ ಅವರ ಹೆಸರನ್ನು ಸೂಚಿಸಿದರು. ಜಿ.ಎಸ್. ಪಾಟೀಲ್ ಹೆಸರನ್ನು ಡಿಸಿಎಂ ಪರಮೇಶ್ವ‌ರ್ ಅನುಮೋದಿಸಿದರು. ಬಳಿಕ ಹಂಗಾಮಿ ಸ್ಪೀಕ‌ರ್ ಪ್ರಸ್ತಾವನೆ ಮತಕ್ಕೆ ಹಾಕಿದರು.


ಪ್ರಸ್ತಾವನೆ ಅಂಗೀಕಾರದ ಬಳಿಕ ನೂತನ ಸ್ಪೀಕರ್ ಆಗಿ ಜಿ.ಎಸ್. ಪಾಟೀಲ್ ಅವಿರೋಧವಾಗಿ ಆಯ್ಕೆಯಾದರು.