ದೈವಾರಾಧಕರ ಒಕ್ಕೂಟ ಉದ್ಘಾಟನೆ

ಲೋಕಬಂಧು ನ್ಯೂಸ್ | ಉಡುಪಿ, ಆ.2
ಅಖಿಲ ಭಾರತ ದೈವಾರಾಧಕರ ಒಕ್ಕೂಟದ ಉಡುಪಿ ನಗರ ಘಟಕವನ್ನು ಬುಡ್ನಾರ್ ಶ್ರೀ ಮೂಕಾಂಬಿಕಾ ದೇವಿ ಕೊರಗಜ್ಜ ಸನ್ನಿಧಾನದಲ್ಲಿ ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ರಮಾನಂದ ಗುರೂಜಿ ಉದ್ಘಾಟಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪರವಾಗಿ ಕುಂಜಿಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದ ಪ್ರಧಾನ ಅರ್ಚಕ ಶೇಷು ಅವರನ್ನು ಸನ್ಮಾನಿಸಲಾಯಿತು.


ಸಮಾಜಸೇವಕ ರಾಯಲ್ ರತ್ನಾಕರ್ ಶೆಟ್ಟಿ ಅತಿಥಿಯಾಗಿದ್ದರು.


ಒಕ್ಕೂಟದ ಕೇಂದ್ರೀಯ ಸಂಸ್ಥಾಪಕ ಅಧ್ಯಕ್ಷ ವಿನೋದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ, ಕೇಂದ್ರೀಯ ಸಮಿತಿ ಕೋಶಾಧಿಕಾರಿ ಸಮಿತ್ ಶೆಟ್ಟಿ, ಉಪಾಧ್ಯಕ್ಷ ನವೀನ್ ಪಾತ್ರಿ, ಜೊತೆ ಕಾರ್ಯದರ್ಶಿ ಶ್ಯಾಮ್, ಸಂಘಟನಾ ಕಾರ್ಯದರ್ಶಿ ಕೃಷ್ಣ ಪೂಜಾರಿ ಅಂಜಾರು ಇದ್ದರು.


ನಗರ ಘಟಕದ ನೂತನ ಅಧ್ಯಕ್ಷರಾಗಿ ಪ್ರಭಾಕರ್, ಉಪಾಧ್ಯಕ್ಷರಾಗಿ ರಾಮ, ಕಾರ್ಯದರ್ಶಿಯಾಗಿ ಶ್ರೀನಿವಾಸ್ ಆಯ್ಕೆಯಾದರು.


ಕುಂಜಿಬೆಟ್ಟು ಬಬ್ಬುಸ್ವಾಮಿ ದೈವಸ್ಥಾನ ಸಮಿತಿ ಸದಸ್ಯ ಭೋಜ ಶೇರಿಗಾರ್, ಕೇಂದ್ರೀಯ ಒಕ್ಕೂಟದ ಸದಸ್ಯರಾದ ಕುಮಾರ್, ಭವಿಷ್, ಸಂದೇಶ್ ಪೂಜಾರಿ ದೊಡ್ಡಣಗುಡ್ಡೆ ಮತ್ತು ಪ್ರಶಾಂತ್ ಪಾತ್ರಿ ಇದ್ದರು.