ಸ್ವಸ್ಥ ಜೀವನಕ್ಕೆ ಸಾಹಿತ್ಯ ‌ಪೂರಕ

ಲೋಕಬಂಧು ನ್ಯೂಸ್ | ಉಡುಪಿ, ಆ.29
ಸಾಹಿತ್ಯ ಜೀವನದ ಅವಿಭಾಜ್ಯ ಅಂಗ. ಸ್ವಸ್ಥ ‌ಜೀವನಕ್ಕೆ ಅದು ಪೂರಕ ಎಂದು ವಿಶ್ರಾಂತ ಪತ್ರಕರ್ತ ಎಸ್.ನಿತ್ಯಾನಂದ ಪಡ್ರೆ ಹೇಳಿದರು.
ಗ್ರಂಥಾಲಯ ಇಲಾಖೆ ಮತ್ತು ನಗರ ಕೇಂದ್ರ ಗ್ರಂಥಾಲಯ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಸಹಯೋಗದಲ್ಲಿ ಪ್ರತಿ ವಾರ ನಡೆಯುವ 'ಗ್ರಂಥಾಲಯದಲ್ಲಿ ನಮ್ಮ ಸಾಹಿತಿ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಕಾವ್ಯ, ಸಾಹಿತ್ಯದ ಅಭಿರುಚಿ ಮೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಆ ಕುರಿತು ಸೂಕ್ಷ್ಮ ಒಳನೋಟ ನೀಡಿದರು.


ಇಂದಿನ ಆಡುಭಾಷೆಯಲ್ಲಿ ಆಗುತ್ತಿರುವ ದೋಷಗಳನ್ನು ಸೋದಾಹರಣೆಯೊಂದಿಗೆ ವಿವರಿಸಿ, ಭಾಷಾ ಬಳಕೆ ಬಗ್ಗೆ ಜಾಗೃತಿ ಮೂಡಿಸಿದರು.


ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ ಅವರ ಕನಸಿನ ಕಾರ್ಯಕ್ರಮವಾಗಿದ್ದು ನಿರಂತರವಾಗಿ ನಡೆಯಲಿದೆ ಎಂದು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ತಿಳಿಸಿದರು.


ಉಡುಪಿ ನಗರ ಕೇಂದ್ರ ಗ್ರಂಥಾಲಯಾಧಿಕಾರಿ ರಂಜಿತಾ ಸಿ., ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ಮತ್ತು ರಂಜಿನಿ ವಸಂತ್, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ್ ಮೊದಲಾದವರಿದ್ದರು.