ಮಂಕಾಳ್ ವೈದ್ಯ ಸಜ್ಜನ ವ್ಯಕ್ತಿ

ಲೋಕಬಂಧು ನ್ಯೂಸ್ | ಬೆಂಗಳೂರು, ಆ.19
ಮೀನುಗಾರ ಕುಟುಂಬದಿಂದ ಬಂದು ಈಗಲೂ ತಮ್ಮ ವೃತ್ತಿಯಲ್ಲಿ ತೊಡಗಿರುವ ಸಜ್ಜನ ವ್ಯಕ್ತಿ ಮಂಕಾಳ್ ವೈದ್ಯ ಅವರನ್ನು ಉಪ ಸಭಾಧ್ಯಕ್ಷರನ್ನಾಗಿ  ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಸಿಎಂ‌ ಡಿ. ಕೆ.ಶಿವಕುಮಾರ್ ಹೇಳಿದರು.
ಉಪಸಭಾಧ್ಯಕ್ಷರ ಆಯ್ಕೆ ನಂತರ ವಿಧಾನಸಭೆಯಲ್ಲಿ ಮಂಗಳವಾರ ಮಾತನಾಡಿದರು.


ವಿರೋಧ ಪಕ್ಷದವರಿಗೆ ಉಪಸಭಾಧ್ಯಕ್ಷ ಸ್ಥಾನ ಬಿಟ್ಟುಕೊಡುವ ಸಂಪ್ರದಾಯವಿದೆ. ಆದರೆ, ಲೋಕಸಭೆಯಲ್ಲಿ ಇನ್ನೂ ಆ ಸ್ಥಾನ ಖಾಲಿ ಬಿಡಲಾಗಿದೆ. ನಾವೂ ಆ ಬಗ್ಗೆಯೂ ಆಲೋಚನೆ ಮಾಡಿದೆವು.‌ ಆದರೆ, ಹೆಚ್ಚು ಒತ್ತಡ ಇದ್ದ ಕಾರಣಕ್ಕೆ ಮಂಕಾಳ್‌ ವೈದ್ಯ ಅವರಿಗೆ ಜವಾಬ್ದಾರಿ ನೀಡಲಾಯಿತು. ಅವರ ಹೆಸರು ಸಚಿವ ಸ್ಥಾನದ ಪಟ್ಟಿಯಲ್ಲಿತ್ತು. ನಾನೇ ಅವರ ಬಳಿ ಮನವಿ ಮಾಡಿ ಈ ಉಪಸಭಾಧ್ಯಕ್ಷರ ಸ್ಥಾನ ಪಡೆಯುವಂತೆ ಕೇಳಿಕೊಂಡೆ ಎಂದರು.


ಉಪ ಸಭಾದ್ಯಕ್ಷರ ಆಯ್ಕೆ ಸಂಬಂಧ ವಿರೋಧ ಪಕ್ಷದವರಿಗೂ ಅಭಿನಂದನೆ ತಿಳಿಸುವುದಾಗಿ ಹೇಳಿದ ಸಿಎಂ ಡಿಕೆಶಿ, ನಮ್ಮ ಪಕ್ಷದ ಲೆಡರ್ ಹೆಡ್'ನಲ್ಲಿ ಸಭಾಪತಿ, ಉಪಸಭಾಪತಿಗಳ ಹೆಸರನ್ನು ಸೂಚಿಸಲಾಗಿತ್ತು ಎಂದು ವಿರೋಧ ಪಕ್ಷದವರು ಅವರದೇ ಆದ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಪ್ರಜಾಪ್ರಭುತ್ವದಲ್ಲಿ ಇದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ ಎಂದರು.