ಲೋಕಬಂಧು ನ್ಯೂಸ್ | ಶೃಂಗೇರಿ, ಆ.21
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಶುಕ್ರವಾರ ಗುರುಭವನದಲ್ಲಿ ವರಮಹಾಲಕ್ಷ್ಮೀ ವ್ರತ ಪೂಜೆ ನಡೆಸಿದರು.
ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶ್ರೀಸೂಕ್ತ, ಕನಕಧಾರಾ ಸ್ತೋತ್ರ ಇತ್ಯಾದಿಗಳ ಪಠಣ ನಡೆಯಿತು.
