ಸಾಸ್ತಾನದಿಂದ ತಿರುಪತಿಗೆ ಪಾದಯಾತ್ರೆ

ಲೋಕಬಂಧು ನ್ಯೂಸ್ | ಬ್ರಹ್ಮಾವರ, ಆ.20
ತಿರುಮಲ ತಿರುಪತಿಗೆ ಸಾಸ್ತಾನದಿಂದ 16ನೇ ವರ್ಷದ ಪಾದಯಾತ್ರೆ ವೆಂಕಟೇಶ್ವರ ಸ್ವೀಟ್ಸ್ ಮಾಲಕ ಪಿ.ಲಕ್ಷ್ಮೀನಾರಾಯಣ ರಾವ್ ನೇತೃತ್ವದಲ್ಲಿ ಆರಂಭಗೊಂಡಿದೆ.
ಪ್ರತಿವರ್ಷದಂತೆ ನಾಗರಪಂಚಮಿಯ ಮರುದಿನ ಬುಧವಾರ ಪಾದಯಾತ್ರೆ ಆರಂಭಗೊಂಡಿದ್ದು, ಸುಮಾರು 18 ದಿನಗಳ ಕಾಲ ಪಾದಯಾತ್ರೆ ಮುಂದುವರಿಯಲಿದೆ. 200ಕ್ಕೂ ಅಧಿಕ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ಭಕ್ತಿ ಮತ್ತು ಶ್ರದ್ಧೆಯಿಂದ ತಿರುಪತಿ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಿದ್ದಾರೆ.


ಪಾದಯಾತ್ರೆ ಸಂದರ್ಭದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ನಾಮಸ್ಮರಣೆ, ಭಜನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತರು ಸಾಗಲಿದ್ದಾರೆ. ಪ್ರತಿವರ್ಷವೂ ಭಕ್ತರನ್ನು ಒಗ್ಗೂಡಿಸಿ ಯಶಸ್ವಿಯಾಗಿ ಪಾದಯಾತ್ರೆ ನಡೆಸಲಾಗುತ್ತಿದ್ದು, ಈ ಬಾರಿಯೂ 200ಕ್ಕೂ ಅಧಿಕ ಭಕ್ತರು ಪಾಲ್ಗೊಂಡಿರುವುದು ವಿಶೇಷ.


ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಸಂಕಲ್ಪದೊಂದಿಗೆ ಭಕ್ತರು ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದಾರೆ.