ಕೃಷ್ಣ ಮಠಕ್ಕೆ ರಿಲಯನ್ಸ್ ಕುಟುಂಬಿಕರ ಭೇಟಿ

ಲೋಕಬಂಧು ನ್ಯೂಸ್ | ಉಡುಪಿ, ಆ.28
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್'ನ ಮುಕೇಶ್ ಧೀರೂಭಾಯಿ ಅಂಬಾನಿ ಕುಟುಂಬಸ್ಥರಾದ ಬಿಜಲ್ ಮೇಸ್ವಾನಿ ಹಾಗೂ ಕುಟುಂಬದವರು‌ ಗುರುವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದರ್ಶನ ಪಡೆದು, ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಠದ ದಿವಾನ ಡಾ.ಉದಯ ಕುಮಾರ್ ಸರಳತ್ತಾಯ ಹಾಗೂ ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್'ನ ಸ್ಥಳೀಯ ಅಧಿಕಾರಿಗಳಾದ ಧನಂಜಯ ಆರ್., ವಿಪಿನ್ ಸಪ್ರೆ, ಶಿವನಂದನ ಹಾಗೂ ಮಾಧವ ಶಾನುಭಾಗ್ ಇದ್ದರು.