ಪುನೀತ್ ಅತ್ತಾವರ್ ನಿರ್ಬಂಧ ಗಂಭೀರ ವಿಚಾರ

ಲೋಕಬಂಧು ನ್ಯೂಸ್ ಕಾಪು, ಆ.14
ಅಖಂಡ ಭಾರತ ಸಂಕಲ್ಪ ದಿನ ದೇಶದ ಏಕತೆ, ಅಖಂಡತೆ ಹಾಗೂ ರಾಷ್ಟ್ರೀಯ ಭಾವನೆಯನ್ನು ಪ್ರತಿಪಾದಿಸುವ ಕಾರ್ಯಕ್ರಮವಾಗಿದ್ದು, ಶಿರ್ವ ವಲಯ ವಿಶ್ವಹಿಂದೂ ಪರಿಷತ್-  ಬಜರಂಗದಳ ನೇತೃತ್ವದಲ್ಲಿ ನಡೆಯಲಿರುವ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಬಜರಂಗದಳ ಪ್ರಮುಖ್ ಪುನೀತ್ ಅತ್ತಾವರ ಅವರಿಗೆ ನಿರ್ಬಂಧ ಹೇರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ತಡೆಯುವ ಉಡುಪಿ ಜಿಲ್ಲಾಡಳಿತದ ಕ್ರಮ ಅತ್ಯಂತ ಗಂಭೀರವಾದ ವಿಚಾರ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಿಂದೂ ಸಮಾಜದ ಧ್ವನಿಯಾಗಿ, ರಾಷ್ಟ್ರೀಯತೆಯ ವಿಚಾರಗಳಲ್ಲಿ ಸಕ್ರಿಯವಾಗಿರುವ ಸಂಫಪರಿವಾರದ ಮುಖಂಡರನ್ನು ನಿರಂತರವಾಗಿ ನಿರ್ಬಂಧಿಸುವ ಅಥವಾ ಕಾರ್ಯಕ್ರಮಗಳಿಂದ ದೂರವಿಡುವ ಪ್ರಯತ್ನ ನಡೆಯುತ್ತಿದೆ ಎಂಬ ಭಾವನೆ ಹಿಂದೂ ಸಮಾಜದಲ್ಲಿ ಮೂಡುತ್ತಿದೆ.


ಬಜರಂಗದಳದ ಪ್ರಮುಖ್ ಪುನೀತ್ ಅತ್ತಾವರ ಮೇಲಿನ ನಿರ್ಬಂಧವನ್ನು ಜಿಲ್ಲಾಡಳಿತ ಮರುಪರಿಶೀಲಿಸಿ, ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳಬೇಕು. ಹಿಂದೂ ಸಂಘಟನೆಗಳ ಮುಖಂಡರನ್ನು ಗುರಿಯಾಗಿಸಿಕೊಂಡು ಯಾವುದೇ ರೀತಿಯ ತಾರತಮ್ಯ ನಡೆಯದಂತೆ ರಾಜ್ಯ ಸರ್ಕಾರ ಎಚ್ಚರ ವಹಿಸಬೇಕು ಎಂದು ಶಾಸಕ ಗುರ್ಮೆ ಆಗ್ರಹಿಸಿದ್ದಾರೆ.