ಲೋಕಬಂಧು ನ್ಯೂಸ್ | ಮಣಿಪಾಲ, ಆ.19
ಇಲ್ಲಿನ ಹುಡ್ಕೋ ಕಾಲನಿ ನಿವಾಸಿ, ಆರ್.ಎಸ್.ಎಸ್. ಹಿರಿಯ ಕಾರ್ಯಕರ್ತ ಕೇಶವರಾಯ ಪ್ರಭು (80) ಬುಧವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿ ಮಣಿಪಾಲ, ಉಡುಪಿ ಮತ್ತು ಕೊಕ್ಕರ್ಣೆಯಲ್ಲಿ ಸೇವೆ ಸಲ್ಲಿಸಿ ಆನಂತರ ಸ್ವಯಂನಿವೃತ್ತಿ ಪಡೆದು ಸಮಾಜ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು ಉಡುಪಿ ಜಿಲ್ಲಾ ಕಾರ್ಯವಾಹರಾಗಿ, ಮಂಗಳೂರು ವಿಭಾಗದ ಸೇವಾಪ್ರಮುಖರಾಗಿದ್ದರು. ಕುಂದಾಪುರದ ಸೇವಾ ಸಂಗಮದ ಕಾರ್ಯದರ್ಶಿಯಾಗಿ, ಬಳಿಕ ಅಧ್ಯಕ್ಷರೂ ಆಗಿದ್ದರು.
ಕುಶಲ ಸಂಘಟಕರಾಗಿದ್ದ ಅವರು ಉಡುಪಿಯ ಪರ್ಯಾಯ ಮಹೋತ್ಸವ ಸಂದರ್ಭಗಳಲ್ಲಿ ವಸತಿ ವ್ಯವಸ್ಥೆಯ ನಿರ್ವಹಣೆ ಮಾಡುತ್ತಿದ್ದು, ಅದಮಾರು ಮಠದ ಪರ್ಯಾಯ ಸಂದರ್ಭದಲ್ಲಿ ಶ್ರೀಕೃಷ್ಣಾನುಗ್ರಹ ಪ್ರಶಸ್ತಿಯಿಂದ ಸನ್ಮಾನಿತರಾಗಿದ್ದರು.
ದತ್ತೋಪಾಸಕರಾಗಿದ್ದ ಅವರು ಪ್ರತಿವರ್ಷ ತಮ್ಮ ಮನೆಯಲ್ಲಿ ದತ್ತ ಜಯಂತಿಯನ್ನು ವೈಭವದಿಂದ ಆಚರಿಸುತ್ತಿದ್ದರು.
ಗುರುವಾರ ಆ.20ರಂದು ಮೃತರ ಅಂತ್ಯಸಂಸ್ಕಾರ ನಡೆಯಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗಮಿಸಿ, ಅಂತಿಮ ದರ್ಶನ ಪಡೆಯುವರು.
