ಬಾಳೆಹಣ್ಣಾಗಿಸಲು ರಾಸಾಯನಿಕ ಬಳಕೆ: ಬಾಳೆ ಮಂಡಿಗೆ ದಾಳಿ

ಲೋಕಬಂಧು ನ್ಯೂಸ್ | ಕಾಪು, ಆ.20
ಅಲೆವೂರು, ಕೆಮ್ತೂರು ಹಾಗೂ ದುಗ್ಲಿಪದವು ಪರಿಸರದಲ್ಲಿ ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್.ಆರ್, ಆಹಾರ ಸುರಕ್ಷತಾ ಅಧಿಕಾರಿ ವಿವೇಕ್, ಉಡುಪಿ ತಹಶೀಲ್ದಾರ್ ಗುರುರಾಜ್ ಹಾಗೂ ವಿವಿಧ ಅಧಿಕಾರಿಗಳ ತಂಡ ಗುರುವಾರ ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಿಢೀರ್ ದಾಳಿ ನಡೆಸಿ, ರಾಸಾಯನಿಕ ಬಳಸಿದ ಬಾಳೆಹಣ್ಣು ಜಫ್ತಿಮಾಡಿ ನಾಶಪಡಿಸಿದರು.
ಬಾಳೆಹಣ್ಣಿಗೆ ಬಳಸುತ್ತಿದ್ದ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳು, ಕೃತಕ ಬಣ್ಣ ನೀಡುವ ರಾಸಾಯನಿಕಗಳು, ಅದನ್ನು ಬಳಸಲು ಉಪಯೋಗಿಸುವ ರಾಸಾಯನಿಕಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸುಮಾರು 5 ಸಾವಿರ ಕೆಜಿ ಬಾಳೆಕಾಯಿಗಳನ್ನು ಸೀಜ಼್ ಮಾಡಲಾಗಿದ್ದು, ಅದರ ಮೌಲ್ಯ ಸುಮಾರು 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.


ಗ್ರಾಮ ಲೆಕ್ಕಾಧಿಕಾರಿಗಳಾದ ಕಾರ್ತಿಕ್ ಭಟ್ ಮತ್ತು ವಿಜಯ, ಆಹಾರ ನಿರೀಕ್ಷಕ ಲೀಲಾನಂದ ಇದ್ದರು.