ಲೋಕಬಂಧು ನ್ಯೂಸ್ | ಪಡುಬಿದ್ರಿ, ಆ.21
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಭವನದಲ್ಲಿ ಶುಕ್ರವಾರ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ನೆರವೇರಿತು.
ಬೆಳಿಗ್ಗೆ 9.30 ಗಂಟೆಗೆ ಕಲಶ ಪ್ರತಿಷ್ಠೆ ನೇರವೇರಿಸಲಾಯಿತು.ನಂತರ ಸಾಮೂಹಿಕ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ಪೂಜಾ ವಿಧಿ-ವಿಧಾನ ನಡೆಯಿತು.
ಮಧ್ಯಾಹ್ನ 12 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ ಅಮ್ಮ, ಶ್ರೀ ಭದ್ರಕಾಳಿ ಅಮ್ಮ ಸನ್ನಿಧಿಯಲ್ಲಿ ಮಹಾಪೂಜೆ ನೆರವೇರಿತು. ಇದೇ ಸಂದರ್ಭದಲ್ಲಿ ಭದ್ರಕಾಳಿ ಅಮ್ಮನ ದರ್ಶನ ಸೇವೆ ನಡೆಯಿತು.
ಮಹಾಪೂಜೆ ಬಳಿಕ ಮಹಾ ಅನ್ನಸಂತರ್ಪಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ.ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ರತ್ನಾಕರ್ ಸಾಲ್ಯಾನ್ ಮಲ್ಪೆ, ಸುಜಿತ್ ಸಾಲ್ಯಾನ್ ಮೂಲ್ಕಿ, ಗುಂಡು ಬಿ. ಅಮೀನ್ ಕಿದಿಯೂರು, ವಿನಯ್ ಕರ್ಕೇರ ಮಲ್ಪೆ, ವಾಸುದೇವ ಸಾಲ್ಯಾನ್ ಕಟಪಾಡಿ, ಸುಧಾಕರ್ ಕುಂದರ್ ಬಂಕೇರ್ ಕಟ್ಟ, ಜಯಾ ಶೆಟ್ಟಿ ಕಟಪಾಡಿ, ದಿನೇಶ್ ಎರ್ಮಾಳ್, ಅನಿಲ್ ಕುಮಾರ್ ಬೊಕ್ಕಪಟ್ಣ, ಸತೀಶ್ ಸಾಲ್ಯಾನ್ ಎರ್ಮಾಳ್, ಮನೋಜ್ ಕಾಂಚನ್ ಎರ್ಮಾಳ್, ಶಿವರಾಮ ಕೋಟ, ಸುಧಾಕರ್ ಸುವರ್ಣ ಎರ್ಮಾಳು, ಮೋಹನ್ ಬಂಗೇರ ಕಾಪು, ಸರ್ವೋತ್ತಮ ಕುಂದರ್, ಶಿವಪ್ಪ ಕಾಂಚನ್ ಮಲ್ಪೆ, ಸತೀಶ್ ಕುಂದರ್ ಮಲ್ಪೆ, ನಾರಾಯಣ ಸಿ. ಕರ್ಕೇರ ಸುಗುಣ ಎಸ್ ಕರ್ಕೇರ, ಕವಿತಾ ಕಾಂಚನ್, ವಿನಯ್ ಕರ್ಕೇರ ಮಲ್ಪೆ, ಸತೀಶ್ ಸಾಲ್ಯಾನ್ ಎರ್ಮಾಳ್, ಪೂರ್ಣಿಮಾ ಚಂದ್ರಶೇಖರ, ಮೋಹನ್ ಬಂಗೇರ ಕಾಪು, ಶ್ರೀ ಮಹಾಲಕ್ಷ್ಮೀ ದೇವಳದ ಪ್ರಬಂಧಕ ಸತೀಶ ಅಮೀನ್ ಪಡುಕರೆ ಮೊದಲಾದವರಿದ್ದರು.
.jpg)
.jpg)
.jpg)
.jpg)