ವಾಲಿಬಾಲ್ ಫ್ರೆಂಡ್ಸ್ ಪರ್ಕಳ ತಂಡದ ಲೋಗೊ ಬಿಡುಗಡೆ

ಲೋಕಬಂಧು ನ್ಯೂಸ್ ಮಣಿಪಾಲ, ಆ.31
ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ವಾಲಿಬಾಲ್ ಫ್ರೆಂಡ್ಸ್ ತಂಡದ ನೂತನ ಲೋಗೊ ಬಿಡುಗಡೆ ಕಾರ್ಯಕ್ರಮ ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ವಾಲಿಬಾಲ್ ಫ್ರೆಂಡ್ಸ್ ತಂಡ ಹಲವು ವರ್ಷಗಳಿಂದ ಸಮಾಜಮುಖಿ ಹಾಗೂ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ದೇವಸ್ಥಾನದ ವಾರ್ಷಿಕ ಜಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಂಡದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮದಲ್ಲಿ ನಡೆಯುವ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲೂ ತಂಡದ ಸದಸ್ಯರು ಸಹಕಾರ ನೀಡುತ್ತಿದ್ದಾರೆ.ತಂಡವನ್ನು ಅಧಿಕೃತವಾಗಿ ನೋಂದಾಯಿಸುವ ಹಿನ್ನೆಲೆಯಲ್ಲಿ ನೂತನ ಲೋಗೊ ಬಿಡುಗಡೆ ಮಾಡಲಾಯಿತು.


ಕಾರ್ಯಕ್ರಮದಲ್ಲಿ ಮುರಳೀಧರ ನಕ್ಷತ್ರಿ, ದಿಲೀಪ್ ರಾಜ್ ಹೆಗ್ಡೆ, ರಾಮದಾಸ್ ಹೆಗ್ಡೆ, ಜಯರಾಜ್ ಹೆಗ್ಡೆ, ದಿನೇಶ್ ಹೆಗ್ಡೆ ಆತ್ರಾಡಿ, ಗಣೇಶ್ ಪಾಟೀಲ್, ಭಾಸ್ಕರ ದೇವಾಡಿಗ, ಪದ್ಮನಾಭ ಬಾಯರಿ, ಸುಖಾನಂದ ಶೆಟ್ಟಿಗಾರ್, ಕೀರ್ತಿ ಕುಮಾರ್, ಸುಧೀರ್ ಶೆಟ್ಟಿ, ಸುಧೀರ್ ಶೆಟ್ಟಿಗಾರ್ ಹಾಗೂ ವಾಲಿಬಾಲ್ ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು.