ಲೋಕಬಂಧು ನ್ಯೂಸ್ ಶೃಂಗೇರಿ
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಮತ್ತವರ ಕರಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಚಾತುರ್ಮಾಸ್ಯ ವ್ರತ ಭಾದ್ರಪದ ಹುಣ್ಣಿಮೆ ಶನಿವಾರ ಶ್ರೀ ಉಮಾಮಹೇಶ್ವರ ವ್ರತ ಪೂಜೆಯೊಂದಿಗೆ ಸಮಾಪ್ತಿಯಾಯಿತು.ಗಂಗಾಪೂಜೆ, ಆಲಯ ದರ್ಶನ ಸಹಿತ ಸೀಮೋಲ್ಲಂಘನವನ್ನು ಉಭಯ ಜಗದ್ಗುರು ನೆರವೇರಿಸಿದರು.
ಉಭಯ ಜಗದ್ಗುರುಗಳು ಇಲ್ಲಿನ ಗುರು ನಿವಾಸದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದು, ಚಾತುರ್ಮಾಸ್ಯ ಅವಧಿಯಲ್ಲಿ ಆಸೇತುಹಿಮಾಚಲದಿಂದ ಕನ್ಯಾಕುಮಾರಿ ವರೆಗೆ ವಿಸ್ತರಿಸಿರುವ ಶ್ರೀಮಠದ ಶಿಷ್ಯವೃಂದ ಶೃಂಗೇರಿಗೆ ಆಗಮಿಸಿ ಗುರುವಂದನೆ ಸಲ್ಲಿಸಿದ್ದರು.