ಲೋಕಬಂಧು ನ್ಯೂಸ್ ಉಡುಪಿ
ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಅಕ್ಟೋಬರ್ 11ರಿಂದ 21ರ ವರೆಗೆ ನಡೆಯಲಿರುವ ಶರನ್ಬವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀಕ್ಷೇತ್ರದಲ್ಲಿ ಶನಿವಾರ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು, ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಭಕ್ತಿ, ಶ್ರದ್ಧೆ ಹಾಗೂ ಧಾರ್ಮಿಕ ಆಚರಣೆಗಳೊಂದಿಗೆ ವೈಭವದಿಂದ ನಡೆಯಲಿದೆ. ನವರಾತ್ರಿಯ ಒಂಭತ್ತು ದಿನ ಮತ್ತು ವಿಜಯ ದಶಮಿಯಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಕ್ಷೇತ್ರದ ವತಿಯಿಂದ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರ ಸಹಭಾಗಿತ್ವ ಹಾಗೂ ಸೇವಾ ಮನೋಭಾವ ಮಹೋತ್ಸವದ ವಿಶೇಷತೆಯಾಗಿದ್ದು, ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಗುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ ರಮಾನಂದ ಗುರೂಜಿ ತಿಳಿಸಿದರು.
ಕ್ಷೇತ್ರದ ನಿಯೋಜಿತ ತಂತ್ರಿ ಸರ್ವೇಶ ತಂತ್ರಿ, ವಿಖ್ಯಾತ್ ಭಟ್ ಮತ್ತು ಗಣೇಶ ಸರಳಾಯ, ಕರ್ಣಾಟಕ ಬ್ಯಾಂಕ್ ಕುಂಭಾಶಿ ಶಾಖೆಯ ಪ್ರಬಂಧಕ ಪ್ರತೀಕ್ ಟಿ.ಆರ್., ಅಖಿಲ ಭಾರತ ದೈವಾರಾಧಕರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಿನೋದ್ ಶೆಟ್ಟಿ, ಕಲಾನಿಧಿ ತಂಡದ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಉಪ್ಪೂರು, ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ ಆಚಾರ್ಯ, ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಉಷಾ ರಮಾನಂದ, ಕ್ಷೇತ್ರದ ಪ್ರಧಾನ ಅರ್ಚಕ ಅನೀಶ್ ಆಚಾರ್ಯ, ಅಲಂಕಾರ ತಜ್ಞ ಆನಂದ ಬಾಯರಿ, ಸ್ವಸ್ತಿಕ್ ಆಚಾರ್ಯ, ನಾಗಶಯನ ಪದಕಣ್ಣಾಯ, ಪ್ರಸನ್ನ ರಾವ್, ಕಲಾವತಿ ಆಚಾರ್ಯ, ಸ್ವಾತಿ ಆಚಾರ್ಯ, ಮೃಣಾಲ್ ಕೃಷ್ಣ ಉಪಸ್ಥಿತರಿದ್ದರು.