ಲೋಕಬಂಧು ನ್ಯೂಸ್ ಶೃಂಗೇರಿ, ಸೆ.14
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಸೋಮವಾರ ಗಣೇಶ ಚತುರ್ಥಿ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ಚಾತುರ್ಮಾಸ್ಯ ವ್ರತನಿಷ್ಠರಾಗಿರುವ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಹಾಗೂ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ವಿಶೇಷ ಪೂಜೆ ಸಲ್ಲಿಸಿದರು.ಅನೇಕ ಮಂದಿ ಭಕ್ತಾದಿಗಳು ನೆರೆದಿದ್ದು ಆಚಾರ್ಯ ಶಂಕರ ವಿರಚಿತ ಗಣೇಶ ಪಂಚರತ್ನ ಸ್ತೋತ್ರ, ಗಣೇಶ ಅಥರ್ವಶೀರ್ಷ ಮೊದಲಾದ ಸ್ತ್ರೋತ್ರ ಪಠಣ ನಡೆಯಿತು.ಶೃಂಗೇರಿಯ ಪ್ರವಚನ ಮಂದಿರದಲ್ಲೂ ಗಣೇಶ ವಿಗ್ರಹ ಪ್ರತಿಷ್ಠಾಪಿಸಲಾಗಿತ್ತು.