ಲೋಕಬಂಧು ನ್ಯೂಸ್ ಮಲ್ಪೆ
2027ರ ಜನವರಿಯಲ್ಲಿ ನಡೆಸಲುದ್ದೇಶಿಸಿರುವ ಕೊಡವೂರು ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆ ದೇವಳದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್ ನೇತೃತ್ವದಲ್ಲಿ ಶನಿವಾರ ನಡೆಯಿತು.ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಗೂ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಕೊಡವೂರು ಮಾತನಾಡಿ, ಬ್ರಹ್ಮಕಲಶೋತ್ಸವ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಿದ್ದು, ಭಕ್ತರ ಸರ್ವರೀತಿಯ ಸಹಕಾರ ಬಯಸಿದರು.
ಸಭೆಯಲ್ಲಿ ಧಾರ್ಮಿಕ ಸಮಿತಿ, ಹೊರೆಕಾಣಿಕೆ ಸಮಿತಿ, ಮೆರವಣಿಗೆ ಸಮಿತಿ, ಪ್ರಚಾರ ಸಮಿತಿ, ಆರೋಗ್ಯ ಸಮಿತಿ, ಸ್ವಾಗತ ಸಮಿತಿ, ಸಾಂಸ್ಕೃತಿಕ ಸಮಿತಿ, ಉಗ್ರಾಣ ಸಮಿತಿ, ಊಟೋಪಚಾರ ಸಮಿತಿ, ಕಚೇರಿ ನಿರ್ವಹಣಾ ಸಮಿತಿ, ಸ್ವಯಂ ಸೇವಕರ ಸಮಿತಿ, ಸ್ವಚ್ಛತಾ ಸಮಿತಿ, ವಿದ್ಯುತ್ ಅಲಂಕಾರ ಸಮಿತಿ, ಚಪ್ಪರ ಸಮಿತಿ, ಮಹಿಳಾ ಘಟಕ ಸಮಿತಿ, ಭದ್ರತಾ ವ್ಯವಸ್ಥೆ ಸಮಿತಿ, ಪಾರ್ಕಿಂಗ್ ಸಮಿತಿ, ವೇದಿಕೆ ಸಮಿತಿ, ಭಜನಾ ಸಮಿತಿ, ಬಾಣಸಿಗರ ಸಮಿತಿ ಹೀಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಈ ಸಂದರ್ಭದಲ್ಲಿ ಆನಂದ ಪಿ. ಸುವರ್ಣ, ನಾಗರಾಜ್ ಸಾಲ್ಯಾನ್, ಹರಿಯಪ್ಪ ಕೋಟ್ಯಾನ್, ಕೃಷ್ಣಮೂರ್ತಿ ಆಚಾರ್ಯ, ತೋಟದಮನೆ ದಿವಾಕರ ಶೆಟ್ಟಿ, ಪಿ.ಗುರುರಾಜ್ ರಾವ್, ಪಾಂಡುರಂಗ ಮಲ್ಪೆ, ಆಶಾ ಚಂದ್ರಶೇಖರ್, ವಿಜಯ ಕೊಡವೂರು, ಮೀನಾಕ್ಷಿ ಮಾಧವ ಬನ್ನಂಜೆ, ನಾರಾಯಣ ಬಲ್ಲಾಳ್, ಉಮೇಶ ರಾವ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಭಾಸ್ಕರ್ ಪಾಲನ್, ಎ.ರಾಜಸೇರಿಗಾರ್, ಕೆ.ಬಾಬ, ಉಷಾ ಎ.ಸುವರ್ಣ, ಶೀಲಾ ಸೇರಿಗಾರ್ ಉಪಸ್ಥಿತರಿದ್ದರು.
ಸೇವಾಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿ, ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕೊಡವೂರು ವಂದಿಸಿದರು.