ನೋಟಿಸ್‌ಗೆ ಉತ್ತರಿಸಲು ತಿಂಗಳ ಕಾಲಾವಕಾಶ ಬೇಕು

ಲೋಕಬಂಧು ನ್ಯೂಸ್ | ಬಂಟ್ವಾಳ
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ಬಂಟ್ವಾಳ ಪೊಲೀಸರು ಹೇಳಿಕೆ ಪಡೆಯಲು ನೀಡಿದ್ದ ನೋಟಿಸ್‌ಗೆ ಉತ್ತರಿಸಲು ఆರ್.ಎಸ್.ಎಸ್. ಮುಂದಾಳು ಡಾ.ಕಲ್ಲಡ್ಕ ಪ್ರಭಾಕರ ಭಟ್ ಒಂದು ತಿಂಗಳ ಕಾಲಾವಕಾಶ ಕೇಳಿದ್ದಾರೆ.
ಪೂರ್ವ ನಿರ್ಧರಿತ ಕಾರ್ಯಕ್ರಮ ಇರುವುದರಿಂದ ವಿಚಾರಣೆಗೆ ಹಾಜರಾಗಲು ಸಮಯ ಬೇಕು ಎಂದವರು ಕೇಳಿಕೊಂಡಿದ್ದಾರೆ.


ಪೊಲೀಸರು ಅದಕ್ಕೆ ಅನುಮತಿ ನೀಡಿದ್ದು, ಕಾಲಾವಕಾಶ ನೀಡಿದ್ದಾರೆ.