ಲೋಕಬಂಧು ನ್ಯೂಸ್ | ಉಡುಪಿ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸ್ವತಂತ್ರ ಚುನಾವಣಾ ಆಯೋಗದ ಮುಖ್ಯಸ್ಥರಂತೆ ವರ್ತಿಸುತ್ತಿಲ್ಲ, ಬದಲಿಗೆ ಬಿಜೆಪಿಯ ಎಲೆಕ್ಷನ್ ಮೋರ್ಚಾದ ಅಧ್ಯಕ್ಷರಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಸ್ವತಂತ್ರವಾಗಿ ಕಾರ್ಯಾಚರಿಸಬೇಕಾದ ಆಯೋಗ ಆಡಳಿತಾರೂಢ ಪಕ್ಷದ ಯುವ ಮೋರ್ಚಾದಂತೆ ಕೆಲಸ ಮಾಡುತ್ತಿರುವುದು ಆಘಾತಕಾರಿ ಎಂದು ಸಹಬಾಳ್ವೆ ಮಾಜಿ ಅಧ್ಯಕ್ಷ ಅಮೃತ್ ಶೆಣೈ ಆರೋಪಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಯೋಜಿಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಇಲ್ಲಸಲ್ಲದ ದಾಖಲೆಗಳನ್ನು ಕೇಳಿ ಸಾರ್ವಜನಿಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದರು.
ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಇದ್ರಿಸ್ ಹೂಡೆ ಮಾತನಾಡಿ, ಚುನಾವಣಾ ಆಯೋಗ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ ಹಾಗೂ ಎಸ್ಐಆರ್ ಪ್ರಕ್ರಿಯೆ ಹೆಸರಿನಲ್ಲಿ ಮತದಾರರಿಗೆ ವಿಶ್ವಾಸ ದ್ರೋಹ ಎಸಗುತ್ತಿದೆ ಎಂದು ಆರೋಪಿಸಿದರು.
ದಲಿತ ಹಿತರಕ್ಷಣಾ ವೇದಿಕೆಯ ಸಂಜೀವ್ ಬಳ್ಕೂರ್, ಅಬ್ದುಲ್ ಅಝೀಜ್ ಉದ್ಯಾವರ, ಪ್ರಮುಖರಾದ ಕುಶಲ, ವೆಲ್ಫೇರ್ ಪಾರ್ಟಿ ಉಪಾಧ್ಯಕ್ಷ ವಿಜಯ ಪಡುಕುದ್ರು, ಸಾಮಾಜಿಕ ಹೋರಾಟಗಾರ ಚಾರ್ಲ್ಸ್ ಅಂಬ್ಲೇರ್, ಅನ್ವರ್ ಅಲಿ ಕಾಪು, ಆಸೀಪ್ ಜಿಡಿ, ಮಮ್ತಾಝ್ ಹೂಡೆ, ಅಬ್ದುಲ್ ರಝಾಕ್ ನಕ್ವಾ ಮೊದಲಾದವರಿದ್ದರು.
