ಲೋಕಬಂಧು ನ್ಯೂಸ್ ಉಡುಪಿ
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಪರಮಶಿವಮೂರ್ತಿ ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ (ಆರ್.ಆರ್.ಸಿ.)ಗೆ ಭೇಟಿ ನೀಡಿ ಸಂಸ್ಥೆಯ ದಾಖಲಾತಿ ವಿಭಾಗ ಹಾಗೂ ಪ್ರಕಟಣಾ ವಿಭಾಗಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಹಾಗೂ ಆರ್.ಆರ್.ಸಿ ಸಹ ಸಂಶೋಧಕ ಡಾ.ಅರುಣಕುಮಾರ್ ಎಸ್.ಆರ್., ಮಾಹೆ ವಿದ್ಯಾರ್ಥಿ ಕೆ.ಶ್ರೇಯಸ್ ಇದ್ದರು.