ಲೋಕಬಂಧು ನ್ಯೂಸ್ | ಕಟೀಲು, ಏ.10
ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಏ.14ರಂದು ಧ್ವಜಾರೋಹಣದೊಂದಿಗೆ
ಏ. 13ರಂದು ರಾತ್ರಿ ಅಂಕುರ ಬಲಿ, 15ರಂದು ಯುಗಾದಿ ದೀಪದ ಬಲಿ, 16ರಂದು ಭ್ರಾಮರೀ ವನದಲ್ಲಿ ಪ್ರತಿಷ್ಠಾ ವರ್ಧಂತಿ, ಮೂಡುಸವಾರಿ, 17ರಂದು ದೀಪದ ಬಲಿ, ಉತ್ಸವ ಬಲಿ, 18ರಂದು ರಾತ್ರಿ ಬೆಳ್ಳಿ
ರಥೋತ್ಸವ, 19ರಂದು ಬ್ರಹ್ಮಸನ್ನಿಧಿಯಲ್ಲಿ ಪರ್ವ, ಪಡುಸವಾರಿ, 20ರಂದು ಹಗಲು ಬ್ರಹ್ಮರಥೋತ್ಸವ, ರಾತ್ರಿ ಶಯನ, 21ರಂದು ಬೆಳಿಗ್ಗೆ ಕವಾಟೋದ್ಘಾಟನೆ, ರಾತ್ರಿ ಅವಭೃತೋತ್ಸವ, ಎಕ್ಕಾರು ಯಾತ್ರೆ, ಬ್ರಹ್ಮರಥೋತ್ಸವ, ತೂಟೆದಾರ ನಡೆಯಲಿದೆ.
ದಿನಂಪ್ರತಿ ಚಿನ್ನದ ಪಲ್ಲಕ್ಕಿ ಉತ್ಸವ, ಚಿನ್ನದ ರಥೋತ್ಸವ ಹಾಗೂ ಸರಸ್ವತೀ ಸದನದಲ್ಲಿ ದಿನವಿಡೀ
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಳದ ಪ್ರಕಟನೆ ತಿಳಿಸಿದೆ.
