ಹಾಸನದ ಭಕ್ತರಿಂದ ಸ್ವಚ್ಛತಾ ಕಾರ್ಯ

ಲೋಕಬಂಧು ನ್ಯೂಸ್ ಉಜಿರೆ, ಏ.7
ಹಾಸನದ ಸೋಮು ಅವರ ನೇತೃತ್ವದಲ್ಲಿ ಯುವಜನ ಸೇನಾ ಪ್ರತಿಷ್ಠಾನ, 'ಕುಡುಮಶ್ರೀ' ಧರ್ಮಸ್ಥಳ ಪಾದಯಾತ್ರೆ  ಸೇವಾ ಸಮಿತಿ, ಭಕ್ತವೃಂದ, ಏಕಲವ್ಯ ಜೀವಜಲ ಪ್ರತಿಷ್ಠಾನದ ಸದಸ್ಯರು ಹಾಗೂ ಇತರ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಸ್ವಚ್ಛತಾ ಕಾರ್ಯವನ್ನು ಸೇವೆಯಾಗಿ ಮಾಡಿದರು.ಮೂವತ್ತು ಮಂದಿ ಪುರುಷರು ಹಾಗೂ ಮಹಿಳೆಯರು ಸೇರಿದಂತೆ ಒಟ್ಟು 40 ಮಂದಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.


ಅವರೆಲ್ಲರೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನವಜೀವನ ಸಮಿತಿ ಹಾಗೂ ಶೌರ್ಯ ಕಾರ್ಯಕ್ರಮಗಳಲ್ಲಿ ಸೇವೆ ಮಾಡುತ್ತಿದ್ದು ಅದರಿಂದ ಪ್ರೇರಿತರಾಗಿ ಸ್ವಚ್ಛತಾ ಕಾರ್ಯ ನೆರವೇರಿಸಿರುವುದಾಗಿ ತಿಳಿಸಿದರು.


ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಭಕ್ತರ ಸೇವಾ ಕಾರ್ಯವನ್ನು ಶ್ಲಾಘಿಸಿ, ಅಭಿನಂದಿಸಿದರು.