ಸಂವಿಧಾನ ಎಲ್ಲಾ ಧರ್ಮಗಳನ್ನು ಒಗ್ಗೂಡಿಸುವ ಗ್ರಂಥ

ಲೋಕಬಂಧು ನ್ಯೂಸ್ ಕೋಟ, ಏ.23
ಹಿಂದೂಗಳಿಗೆ ಭಗವದ್ಗೀತೆ, ಮುಸ್ಲಿಮರಿಗೆ ಕುರಾನ್, ಕ್ರೈಸ್ತರಿಗೆ ಬೈಬಲ್ ಇರುವಂತೆ ಎಲ್ಲಾ ಧರ್ಮಗಳನ್ನೂ ಒಪ್ಪಿಕೊಳ್ಳುವ ಸಂವಿಧಾನ ಎಂಬ ಮಹಾಗ್ರಂಥವನ್ನು ದೇಶಕ್ಕೆ ನೀಡಿದವರು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಎಂದು ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.ಕೋಟ- ಸಾಲಿಗ್ರಾಮ ರೋಟರಿ ಕ್ಲಬ್‌ನಲ್ಲಿ ನಡೆದ ವಾರದ ಸಭೆಯಲ್ಲಿ ಆಯೋಜಿಸಲಾದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಮುಖ್ಯ ಉಪನ್ಯಾಸ ನೀಡಿದರು.


ಸಂವಿಧಾನದಲ್ಲಿ ಮಾನವರಷ್ಟೇ ಅಲ್ಲದೆ ಪ್ರಕೃತಿಯ ಪ್ರತಿಯೊಂದು ಅಂಶಕ್ಕೂ ಸ್ಥಾನ ನೀಡಲಾಗಿದೆ. ಭಾರತ 142 ಕೋಟಿ ಜನಸಂಖ್ಯೆ ಹೊಂದಿರುವ ವಿಶ್ವದ ಸುಮಾರು 17.75 ಶೇ. ಜನರನ್ನು ಒಳಗೊಂಡ ವೈವಿಧ್ಯಮಯ ದೇಶ. ಇಂಥ ವೈವಿಧ್ಯತೆಯ ದೇಶಕ್ಕೆ ಸಂವಿಧಾನ ರಚಿಸುವುದು ಸುಲಭದ ಕೆಲಸವಲ್ಲ. 543 ಸಂಸ್ಥಾನಗಳಿದ್ದ ದೇಶದಲ್ಲಿ ಗಡಿ ಬದಲಾವಣೆಗಳ ನಡುವೆ, ರಾಜ್ಯಗಳ ಗಡಿ ರೇಖೆಗಳನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ಸಂವಿಧಾನದ ಪಾತ್ರ ಮಹತ್ವದ್ದಾಗಿದೆ ಎಂದರು.


ರೋಟರಿ ಕ್ಲಬ್ ಅಧ್ಯಕ್ಷ ಯೋಗೀಶ್ ಅಧ್ಯಕ್ಷತೆ ವಹಿಸಿದ್ದರು.


ಕೋಶಾಧಿಕಾರಿ ಚಂದ್ರ ಪೂಜಾರಿ, ಮಾಜಿ ಅಧ್ಯಕ್ಷ ತಿಮ್ಮ ಪೂಜಾರಿ, ದೇವೇಂದ್ರ ಪಟಗಾರ್, ರಾಜೇಂದ್ರ ಸುವರ್ಣ ಮೊದಲಾದವರಿದ್ದರು.


ನಿವೃತ್ತ ಪ್ರಾಂಶುಪಾಲ ಕೃಷ್ಣ ಕಾಂಚನ್ ಅವರು ಬಾಲಕೃಷ್ಣ ಶೆಟ್ಟಿ ಅವರನ್ನು ಪರಿಚಯಿಸಿದರು. ಕೋಟ- ಸಾಲಿಗ್ರಾಮ ರೋಟರಿ ಕ್ಲಬ್ ಕಾರ್ಯದರ್ಶಿ ಶರಣಯ್ಯ ಹಿರೇಮಠ್ ವಂದಿಸಿದರು.