ಸದ್ಗುಣಗಳ ಪ್ರಚಾರದಿಂದ ಧನಾತ್ಮಕ ವಾತಾವರಣ

ಲೋಕಬಂಧು ನ್ಯೂಸ್, ಉಡುಪಿ, ಏ.21
ಇನ್ನೊಬ್ಬರ ದೋಷಗಳ ಬದಲು ಅವರ ಸದ್ಗುಣಗಳ ಪ್ರಚಾರ ಮಾಡಿದಲ್ಲಿ ಸಮಾಜದಲ್ಲಿ ಧನಾತ್ಮಕ ವಾತಾವರಣ ನಿರ್ಮಾಣ ಮಾಡಬಹುದು ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವೈಭವ ಪ್ರಯುಕ್ತ ರವಿವಾರ ನಾಡೋಜ‌ ಡಾ‌ ಜಿ. ಶಂಕರ್ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.


ಶಿವ ಬೇರೆಯವರ ದೋಷವನ್ನು ಕಂಠದಲ್ಲಿ ಹಾಗೂ ಬೇರೆಯವರ ಉತ್ತಮ ಗುಣಗಳನ್ನು ಚಂದಿರನಂತೆ ತಲೆಯ ಮೇಲೆ  ಹೊತ್ತುಕೊಂಡಿದ್ದಾನೆ. ಅಂಥ ರುದ್ರ ದೇವರನ್ನು ಆರಾಧಿಸಿ ಅವನ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀಪಾದರು ಸಲಹೆ ನೀಡಿದರು.


ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.


ಉದ್ಯಮಿ ಉದಯಕುಮಾರ್‌ ಶೆಟ್ಟಿ ಮುನಿಯಾಲು, ಕಿದಿಯೂರು ಗ್ರೂಪ್ ಆಫ್ ಹೊಟೇಲ್‌ ಪ್ರವರ್ತಕ ಭುವನೇಂದ್ರ ಕಿದಿಯೂರು, ಬಿಲ್ಲವ ಮಹಾಮಂಡಳ ಉಪಾಧ್ಯಕ್ಷ ಬಿ. ಎನ್. ಶಂಕರ್ ಪೂಜಾರಿ, ಹಿರಿಯ ವಕೀಲೆ ವಾಣಿ ವಿ. ರಾವ್, ಹೈದರಾಬಾದ್‌‌ನ ಸಿಎ ಗಣೇಶ್ ರಾವ್, ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ, ಕಾಂಚನ್ ಹುಂಡೈ ಮೋಟಾರ್ಸ್ ಪ್ರವರ್ತಕ ಪ್ರಸಾದ್ ರಾಜ್ ಕಾಂಚನ್, ಬನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷ ಶಶಿಧರ್ ಅಮೀನ್, ಪ್ರಧಾನ ಅರ್ಚಕ ವಾಸುದೇವ ಉಪಾಧ್ಯ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಮೇಶ್ ಕಾಂಚನ್, ದೇವಳದ ಆಡಳಿತ ಸಮಿತಿ ಸದಸ್ಯರಾದ ದಿನೇಶ್ ಪುತ್ರನ್, ಶಮಿತಾ ಭಂಡಾರಿ, ವಿದ್ಯಾಲತಾ ಶೆಟ್ಟಿ, ಪ್ರಭಾಕರ್ ಶೆಟ್ಟಿ ಶೇಖರ್‌ ಶೆಟ್ಟಿ,ರಾಜೇಶ್ ಬಿ., ಸುದೇಶ್ ಶೇಟ್ ಉಪಸ್ಥಿತರಿದ್ದರು.


ದೇವಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಾಧವ ಪೂಜಾರಿ ಸ್ವಾಗತಿಸಿ, ಅರ್ಪಿತಾ ಪ್ರಶಾಂತ್ ಶೆಟ್ಟಿ ವಂದಿಸಿದರು. ದಯಾನಂದ, ಧನಂಜಯ, ಪಾಕತಜ್ಞ ಜಯಂತ್ ಎಸ್. ಬಿ. ಹಾಗೂ ಗೀತಾ ಅವರನ್ನು ಗೌರವಿಸಲಾಯಿತು.