ಲೋಕಬಂಧು ನ್ಯೂಸ್ | ಉಡುಪಿ, ಏ.8
ಹಿಂದೂ ಸಂಸ್ಕೃತಿಯಲ್ಲಿ ಪ್ರಕೃತಿ ಆರಾಧನೆಗೆ ವಿಶೇಷ ಸ್ಥಾನ- ಮಾನವಿದ್ದು, ಪ್ರಕೃತಿಯ ಮಡಿಲಿನಲ್ಲಿರುವ ಕ್ಷೇತ್ರದಲ್ಲಿ ದೈವೀಶಕ್ತಿ ಹೆಚ್ಚಿರುತ್ತದೆ. ಇಂದ್ರಾಳಿ ಮುಖ್ಯಪ್ರಾಣ ದೇವರ ಸನ್ನಿಧಿ ಅರಣ್ಯ ಪ್ರದೇಶದ ತಪ್ಪಲಿನಲ್ಲಿದ್ದು, ಇದು ಭಕ್ತ ಮತ್ತು ಭಗವಂತನಿಗೆ ಕೊಂಡಿಯಾಗಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರು ಹಾಗೂ ನಾಗದೇವರ ಗುಡಿಯಲ್ಲಿ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಇಂದ್ರಾಳಿ ಮುಖ್ಯಪ್ರಾಣ ದೇವರು ಹಾಗೂ ನಾಗದೇವರ ಸನ್ನಿಧಿ ಭಕ್ತರ ಸಹಕಾರದೊಂದಿಗೆ ವೈಭವಯುತವಾಗಿ ಜೀರ್ಣೋದ್ಧಾರಗೊಂಡಿದೆ. ಪ್ರಾಣದೇವರ ಆರಾಧನೆಯಿಂದ ಭಕ್ತರ ಸಂಕಷ್ಟಗಳು ದೂರವಾಗುತ್ತದೆ. ಉಸಿರಿನ ದೇವರಾದ ಪ್ರಾಣದೇವರಿಗೆ ಅಗ್ರಮಾನ್ಯ ಸ್ಥಾನಮಾನವಿದೆ. ಉಸಿರಿನ ದೇವತೆಯ ಆರಾಧನೆ ನಮ್ಮೆಲ್ಲರ ಬದುಕಿಗೆ ಅತೀ ಅಗತ್ಯ. ಪ್ರಾಣದೇವರ ಆರಾಧನೆಯಿಂದ ವಿಶೇಷವಾದ ಅನುಗ್ರಹ ಪ್ರಾಪ್ತಿಯಾಗಲಿ. ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.
ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ದೇವತಾ ಕಾರ್ಯಗಳು ನಿರಂತರ ನಡೆದಾಗ ಊರಿನ ಜನರು ಒಗ್ಗೂಡುತ್ತಾರೆ. ಊರು ಕಟ್ಟುವಲ್ಲಿ ದೇವಳದ ಪಾತ್ರ ಮಹತ್ತರವಾಗಿದೆ ಎಂದರು.
ಇಂದ್ರಾಳಿ ಶ್ರೀಮುಖ್ಯಪ್ರಾಣ ದೇವರು ಹಾಗೂ ನಾಗದೇವರ ಗುಡಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಂಚನ ಹುಂಡೈ ಉಡುಪಿ ಆಡಳಿತ ನಿರ್ದೇಶಕ ಪ್ರಸಾದರಾಜ್ ಕಾಂಚನ್, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಇಂದ್ರಾಣಿ ಶ್ರೀಪಂಚದುರ್ಗಾಪರಮೇಶ್ವರಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಕುಶಲ್ ಶೆಟ್ಟಿ, ಶ್ರೀನಾಗೇಶ್ ಹೆಗ್ಡೆ, ನಗರಸಭೆ ಮಾಜಿ ಸದಸ್ಯ ಅಶೋಕ್ ನಾಯ್ಕ್, ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯ ಸುಕುಮಾರ್ ಆಚಾರ್ಯ, ಶೋಭಾ ಡಿ. ಶೆಟ್ಟಿ, ಸುರೇಶ್ ಶೆಟ್ಟಿಗಾರ್, ಮುಖ್ಯಪ್ರಾಣ ದೇವಳದ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ, ವೈದಿಕ ಸಮಿತಿ ಸದಸ್ಯರಾದ ಪ್ರದ್ಯುಮ್ನ ಭಟ್, ಯೋಗೀಶ್ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ ಉಪಸ್ಥಿತರಿದ್ದರು.
ವಿದ್ವಾಂಸ ವಾದಿರಾಜ ಕೊಲಕ್ಕಾಡಿ ಧಾರ್ಮಿಕ ಉಪನ್ಯಾಸ ನೀಡಿದರು. ದೇವಳದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಸಾಧನಾ ಭಟ್ ನಿರೂಪಿಸಿದರು.
