ಲೋಕಬಂಧು ನ್ಯೂಸ್ | ಉಡುಪಿ, ಏ.7
ಇಂದ್ರಾಣಿ ಶ್ರೀಮುಖ್ಯಪ್ರಾಣ ಗುಡಿಯ ಪುಷ್ಕರಿಣಿ ಬಳಿಯ ಶ್ರೀ ನಾಗದೇವರ ಗುಡಿಯಲ್ಲಿ ಮಂಗಳವಾರ ಶ್ರೀ ನಾಗದೇವರ ಪುನಃಪ್ರತಿಷ್ಠೆ ನಡೆಯಿತು.
ಅದಕ್ಕೂ ಪೂರ್ವದಲ್ಲಿ ಶುದ್ಧ ಸಂಪ್ರೋಕ್ಷಣೆ, ವಾಸ್ತುರಕ್ಷಾ ಹೋಮ, ವಾಸ್ತುಬಲಿ, ಬಿಂಬಾಧಿವಾಸ ಇತ್ಯಾದಿ ಧಾರ್ಮಿಕ ಪ್ರಕ್ರಿಯೆಗಳು ನಡೆದವು.
ಪ್ರತಿಷ್ಠಾ ಹೋಮದ ಬಳಿಕ ಬೆಳಿಗ್ಗೆ 9.03ಕ್ಕೆ ಶ್ರೀ ನಾಗದೇವರ ಪುನಃಪ್ರತಿಷ್ಠೆ, ಪ್ರಧಾನ ಹೋಮ, ಸರ್ಪತ್ರಯ ಹೋಮ, ಕೂಷ್ಮಾಂಡ ಹೋಮ ಬಳಿಕ ಆಶ್ಲೇಷಾ ಬಲಿ, 49 ಕಲಶಾರಾಧನೆ, ಪಂಚಾಮೃತ ಕಲಶಾಭಿಷೇಕ, ಮಹಾಪೂಜೆ, ವಟು ಆರಾಧನೆ, ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ನಡೆಯಿತು.
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)