ಕೆಳಕಬ್ಯಾಡಿ ಶ್ರೀ ಅಂಬಾಭವಾನಿ ದೇವಳ ಜೀರ್ಣೋದ್ದಾರ: ವಿಜ್ಞಾಪನಪತ್ರ ಬಿಡುಗಡೆ

ಲೋಕಬಂಧು ನ್ಯೂಸ್ | ಉಡುಪಿ, ಏ.6
ಪರ್ಕಳ ಕೆಳಕಬ್ಯಾಡಿ ಶ್ರೀ ಅಂಬಾಭವಾನಿ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಇತ್ತೀಚೆಗೆ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಗೌರವ ಸಲಹೆಗಾರ ದಿನೇಶ್ ಶೆಟ್ಟಿ ಆತ್ರಾಡಿ ಅವರು ವಿಜ್ಞಾಪನಪತ್ರ ಬಿಡುಗಡೆಗೊಳಿಸಿ, ದೇವಸ್ಥಾನದ ಅಭಿವೃದ್ಧಿ ಕಾರ್ಯದಲ್ಲಿ ಊರ, ಪರವೂರ ಎಲ್ಲಾ ಭಕ್ತ ಸಮುದಾಯ ಪಾಲ್ಗೊಂಡು ಸಹಕರಿಸುವಂತೆ ಮನವಿ ಮಾಡಿದರು.


ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕಬ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಶೀಘ್ರದಲ್ಲಿ ಜೀರ್ಣೋದ್ಧಾರ ಕಾರ್ಯ ಆರಂಭಗೊಳ್ಳಲಿದ್ದು ಊರಿನ ಭಕ್ತವೃಂದ ಪಾಲ್ಗೊಂಡು ಭಕ್ತಿಯ ಕಾಣಿಕೆ ಸಲ್ಲಿಸಿ ಪುನೀತರಾಗುವಂತೆ ಕರೆ ನೀಡಿದರು.


ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಸುಕೇಶ್ ನಾಯ್ಕ್, ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ಸತೀಶ್ ನಾಯ್ಕ್ ಮೊದಲಾದವರಿದ್ದರು.


ಜೀರ್ಣೋದ್ದಾರ ಸಮಿತಿ ಸದಸ್ಯ ಕೃಷ್ಣಾನಂದ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.