ಕೊಡವೂರು ಮಹಾರುದ್ರ ಯಾಗ ಆಮಂತ್ರಣ ಪತ್ರಿಕೆ ಬಿಡುಗಡೆ

ಲೋಕಬಂಧು ನ್ಯೂಸ್ ಉಡುಪಿ, ಏ.26
ಲೋಕ ಕಲ್ಯಾಣಾರ್ಥವಾಗಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಂದಾಳು ಪ್ರಸಾದ್‌ರಾಜ್‌ ಕಾಂಚನ್ ನೇತೃತ್ವದಲ್ಲಿ ಮೇ 14ರಿಂದ 19ರ ವರೆಗೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯುವ ಮಹಾರುದ್ರ ಯಾಗದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದ​ ವಸಂತ  ಮಂಟಪದಲ್ಲಿ ಅನಾವರಣಗೊಳಿಸಲಾಗಿದ್ದು, ಉದ್ಯಮಿ ಸಾಧು ಸಾಲ್ಯಾನ್‌ ಬಿಡುಗಡೆಗೊಳಿಸಿ ಶುಭ ಹಾರೈಸಿದರು.ಮಹಾರುದ್ರ ಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್‌ರಾಜ್‌ ಕಾಂಚನ್‌ ಮಾತನಾಡಿ, ಮಹಾರುದ್ರ ಯಾಗ ನಡೆಯುವುದೇ ಅತ್ಯಂತ ವಿರಳ. ಕೊಡವೂರಿನಲ್ಲಿ ನಡೆಯುವ ಮಹಾರುದ್ರ ಯಾಗದ ಜೊತೆಗೆ ಬಡಜನರಿಗೆ ಆರೋಗ್ಯ ಸೇವೆ ಮತ್ತು ಉದ್ಯೋಗ ಕಲ್ಪಿಸುವ ಮಹತ್ಕಾರ್ಯ ಮಾಡಲಾಗುತ್ತಿದೆ. ಮಾತ್ರವಲ್ಲದೆ ಕ್ರೀಡಾಕೂಟ, ವಸ್ತುಪ್ರದರ್ಶನ, ಪ್ರಸಿದ್ದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

40 ಸಾವಿರ ಮಂದಿಗೆ ಆಮಂತ್ರಣ
ಮಹೋತ್ಸವದಲ್ಕಿ ಸರ್ವರೂ ಭಾಗವಹಿಸಬೇಕೆಂಬ ಆಶಯದಿಂದ ಸುಮಾರು 40 ಸಾವಿರ ಜನರಿಗೆ ಆಮಂತ್ರಣ ಪತ್ರಿಕೆ ವಿತರಿಸಲಾಗುವುದು. ​ಮೇ 1​4ರಿಂದ 5 ದಿನಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ. ವಿಶೇಷವಾಗಿ 5 ಸಾವಿರ ಮಹಿಳೆಯರಿಗೆ ಮಹಾರುದ್ರ ಯಾಗ ಸಂಕಲ್ಪದೊಂದಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.


ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಾಧವ ಪೂಜಾರಿ ಬನ್ನಂಜೆ, ಉಪ್ಪೂರು ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಶಾಂತ್‌ ಸುವರ್ಣ, ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಖ್ಯಾತ್‌ ಶೆಟ್ಟಿ​ ಬೆಳ್ಕಳೆ, ನಗರಸಭಾ ಮಾಜಿ ಸದಸ್ಯ ವಿಜಯ ಕೊಡವೂರು, ಡೆಂಟಾಕೇರ್‌ನ ಡಾ‌. ವಿಜಯೇಂದ್ರ ವಸಂತ್‌, ಭಜನಾ ಸಂಚಾಲಕ ಧನಂಜಯ ಕಾಂಚನ್,  ಕೊಡವೂರು ​ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಾದಿರಾಜ್‌​ ಸಾಲ್ಯಾನ್, ರಾಜ ಸೇರಿಗಾರ, ಶೀಲಾ ಕೃಷ್ಣ ದೇವಾಡಿಗ, ಭಾಸ್ಕರ ಪಾಲನ್‌​ ಬಾಚನಬೈಲು ಮತ್ತು ಕೆ.ಬಾಬ ಮೊದಲಾದವರಿದ್ದರು.


ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್‌ ನಿರೂಪಿಸಿದರು. ಸೇವಾ ಸಮಿತಿ ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು.​