ಕೊಡವೂರು: ಮಹಾರುದ್ರ ಯಾಗ ಮಾಹಿತಿ ಕಚೇರಿ ಉದ್ಘಾಟನೆ

ಲೋಕಬಂಧು ನ್ಯೂಸ್ ಉಡುಪಿ, ಏ.23
ಕೊಡವೂರು ​ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ​ ಮೇ 14ರಿಂದ 20ರ ವರೆಗೆ ನಡೆಯುವ ಮಹಾರುದ್ರ ಯಾಗದ ಮಾಹಿತಿ ಕಚೇರಿಯನ್ನು ಗುರುವಾರ ಉದ್ಘಾಟಿಸಲಾಯಿತು.ಅಪೂರ್ವವಾದ ಈ ಪುಣ್ಯಪ್ರದ ಕಾರ್ಯದಲ್ಲಿ ಭಗವದ್ಭಕ್ತರೆಲ್ಲರೂ ಪಾಲ್ಗೊಳ್ಳುವ ಮೂಲಕ ಎಲ್ಲರ ಬಾಳು ಹಸನಾಗಲಿ ಎಂದು ಮಾಹಿತಿ ಕಚೇರಿ ಉದ್ಘಾಟ​ಸಿದ ಉಡುಪಿ ನಗರ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹೇಳಿದರು.


ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಕೊಡವೂರು, ಮಹಾರುದ್ರ ಯಾಗದ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಸಂಚಾಲಕ ಡಾ. ವಿಜಯೇಂದ್ರ  ವಸಂತ್, ಶಂಕರನಾರಾಯಣ ಭಕ್ತವೃಂದ ಅಧ್ಯಕ್ಷ ತೋಟದಮನೆ ದಿವಾಕರ  ಶೆಟ್ಟಿ, ಸುಕನ್ಯ ಪೂಜಾರಿ, ರಮೇಶ್ ತಿಂಗಳಾಯ, ನಂದಕಿಶೋರ್, ಸೀತಾರಾಮ ಆಚಾರ್ಯ ಮತ್ತು ವಾದಿರಾಜ ಸಾಲ್ಯಾನ್, ಸೇವಾಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ ಕೊಡವೂರು, ಶ್ರೀ ದೇವಳದ ಉಮೇಶ್ ರಾವ್ ಉಪಸ್ಥಿತರಿದ್ದರು.