ನಾರಾಯಣ ರಾವ್ ನಿಧನ

ಲೋಕಬಂಧು ನ್ಯೂಸ್ ಕಾರ್ಕಳ, ಏ.29
ಇಲ್ಲಿಗೆ ಸಮೀಪದ ನಲ್ಲೂರು ನಿವಾಸಿ, ಮೂಲತಃ ಬೈಲೂರು ಕುಂಜಿಬೆಟ್ಟಿನ ನಾರಾಯಣ ರಾವ್ (97) ಉಳ್ಳೂರು ಕೆ.ಜಿ. ರೋಡ್'ನಲ್ಲಿರುವ ಪುತ್ರಿಯ ಮನೆಯಲ್ಲಿ ಈಚೆಗೆ ನಿಧನರಾದರು.ಅವರು ನಾಯರ್ ಬೆಟ್ಟು ಶಾಲೆ, ತೆಳ್ಳಾರು, ನಲ್ಲೂರು, ಮಿಯ್ಯಾರು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮೂರು ದಶಕಗಳ ಕಾಲ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದರು.


ಸಂಘಸಂಸ್ಥೆಗಳ ಮೂಲಕ ಸಮಾಜ ಸೇವಾ ನಿರತರಾಗಿದ್ದ ಅವರಿಗೆ ಪುತ್ರ, ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಸಿಬ್ಬಂದಿ ಪ್ರೇಮಾನಂದ ರಾವ್ ಮತ್ತು ಇಬ್ಬರು ಪುತ್ರಿಯರಿದ್ದಾರೆ.