ಮೀನುಗಾರಿಕೆಗೆ ಪರ್ಸೀನ್ ಮೀನುಗಾರರ ಕೊಡುಗೆ ದೊಡ್ಡದು

ಲೋಕಬಂಧು ನ್ಯೂಸ್ ಉಡುಪಿ, ಏ.26
ಕರಾವಳಿಯ ಮೀನುಗಾರಿಕೆಗೆ ಪರ್ಸೀನ್ ಮೀನುಗಾರರ ಸಂಘ ದೊಡ್ಡ ಕೊಡುಗೆ ನೀಡಿದೆ. ಅವರನ್ನು ಗುರುತಿಸುವ ಕಾರ್ಯ ನಮ್ಮ ಕರ್ತವ್ಯ. ಮೀನುಗಾರಿಕೆ ಅಭಿವೃದ್ಧಿಗೆ ಅಗತ್ಯ ಬೇಡಿಕೆ ಈಗಾಗಲೇ ಸಲ್ಲಿಸಿರುವುದಾಗಿ ಶಾಸಕ ಯಶಪಾಲ್ ಸುವರ್ಣ ಹೇಳಿದರು.ಮಲ್ಪೆ‌ ಕಡಲ ಕಿನಾರೆಯಲ್ಲಿ ನಡೆಯುತ್ತಿರುವ
ಪರ್ಸೀನ್ ಮೀನುಗಾರರ ಸಂಘದ ರಜತ‌ ಮಹೋತ್ಸವದಲ್ಲಿ ಶನಿವಾರ ಹಿರಿಯ ಮೀನುಗಾರರನ್ನು ಸನ್ಮಾನಿಸಿ ಮಾತನಾಡಿದರು.
ಕಾಂಗ್ರೆಸ್ ಮುಂದಾಳು ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ನಾವು ನಮ್ಮ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಅವರನ್ನು ಸಾಮಾಜಿಕವಾಗಿ ಬೆಳೆಸಬೇಕು ಎಂಬ ನೆಲೆಯಲ್ಲಿ ಕಷ್ಟಪಟ್ಟು ಅವರನ್ನು ಬೆಳೆಸುವ ಕಾರ್ಯವನ್ನು ಪರ್ಸೀನ್ ಮೀನುಗಾರರು ಮಾಡುತ್ತಿದ್ದಾರೆ. ತಾಂಡೇಲರ ದೂರಾಲೋಚನೆಯ ಪರಿಣಾಮ ನಮ್ಮ ಕರಾವಳಿಯ ಆರ್ಥಿಕತೆಗೆ ಉತ್ತಮ ಚೈತನ್ಯ ಲಭಿಸಿದೆ ಎಂದರು.
ಪರ್ಸೀನ್ ಮೀನುಗಾರರಾದ ಶೇಖರ ಅಮೀನ್, ನಾರಾಯಣ ಸಾಲ್ಯಾನ್, ಗೋಪಾಲ ಬಂಗೇರ, ನಾಗೇಶ್ ಬಂಗೇರ, ನಾರಾಯಣ ಕೋಟ್ಯಾನ್, ಶಂಕರ ಸಾಲ್ಯಾನ್, ರತ್ನಾಕರ ಕೋಟ್ಯಾನ್, ಗೋಪಾಲ ತಿಂಗಳಾಯ, ಅಶ್ವಥ್ ಸುವರ್ಣ, ಶೇಖರ ಸುವರ್ಣ, ಸುಂದರ ಸುವರ್ಣ, ಶಂಕರ ಕೋಟ್ಯಾನ್, ಕೃಷ್ಣಪ್ಪ ಕುಂದರ್, ಶೇಖರ ಮೈಂದನ್, ತಿಮ್ಮ ಬಂಗೇರ, ವೋಳ ಕೋಟ್ಯಾನ್, ಮಂಜಪ್ಪ ಸುವರ್ಣ, ಗುರುರಾಜ್, ರವೀಶ್ ಕಾಂಚನ್, ಕೃಷ್ಣಪ್ಪ ಅಮೀನ್, ಪಾಂಡುರಂಗ ಜಿ. ಕೋಟ್ಯಾನ್, ರೋಹಿತ್ ಶ್ರೀಯಾನ್, ಶೇಷಪ್ಪ ಸಾಲ್ಯಾನ್, ಧನಂಜಯ್ ಆರ್. ಕರ್ಕೇರ, ರಮೇಶ್ ಮೈಂದನ್, ಪುರಂದರ ಅಮೀನ್, ವಿಠಲ ತಿಂಗಳಾಯ, ಸಂಜೀವ ಕುಂದರ್, ವಾಸುದೇವ ಕುಂದರ್, ಪ್ರಕಾಶ್ , ವಾಸು ಬಂಗೇರ, ಶೇಖರ ಟಿ. ಸುವರ್ಣ, ಶಿವರಾಮ ಪುತ್ರನ್, ರಮೇಶ್ ಸಾಲ್ಯಾನ್, ಚಂದ್ರಕಾಂತ್ ಕುಂದರ್ ಮತ್ತು ಶೇಖರ ಕಾಂಚನ್ ಅವರನ್ನು ಸನ್ಮಾನಿಸಲಾಯಿತು.
ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಪರ್ಸೀನ್ ಮೀನುಗಾರರ ಸಂಘದ ಗೌರವ ಸಲಹೆಗಾರ ಗುರುದಾಸ ಬಂಗೇರ, ಗೌರವಾಧ್ಯಕ್ಷ ಯಶೋಧರ ಅಮೀನ್, ಪ್ರಮುಖರಾದ ಉದಯ್ ಕುಮಾರ್, ಯಾಕೂಬ್, ದೇವದಾಸ್ ಪುತ್ರನ್, ಸುಧಾಕರ್ ತಿಂಗಳಾಯ, ರಾಮ ಸುವರ್ಣ, ರಮೇಶ್ ಮೆಂಡನ್, ರಾಮದಾಸ್ ಸುವರ್ಣ ಮೊದಲಾದವರಿದ್ದರು.
ಸಮೀಕ್ಷಾ ಪ್ರಾರ್ಥಿಸಿದರು. ಮಲ್ಪೆ ಪರ್ಸೀನ್ ಮೀನುಗಾರರ ಸಂಘದ ರಜತ ಸಂಭ್ರಮದ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸ್. ಸುವರ್ಣ ಸ್ವಾಗತಿಸಿದರು.
ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ನಿರೂಪಿಸಿ, ವಂದಿಸಿದರು.