ಲೋಕಬಂಧು ನ್ಯೂಸ್ ಉಡುಪಿ, ಏ.25
ಹವಾಮಾನ ಪರಿಸ್ಥಿತಿಯೊಂದಿಗೆ ಉದ್ಯೋಗ, ಜೀವನ ನಿರ್ವಹಣೆ ಮಾಡುವ ಮೀನುಗಾರರಿಗೆ ಪ್ರತೀ ವರ್ಷ ಒಂದೇ ರೀತಿಯಾದ ಆದಾಯ ಇರುತ್ತದೆ ಎಂದು ನೀರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಉತ್ತಮ ಆದಾಯ ಇರುವ ಸಂದರ್ಭದಲ್ಲಿ ಒಂದಷ್ಟು ಹಣವನ್ನು ಕೂಡಿಡುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಮೀನುಗಾರರಿಗೆ ಕಿವಿಮಾತು ಹೇಳಿದರು.ಮಲ್ಪೆ ಬೀಚ್'ನಲ್ಲಿ ಶುಕ್ರವಾರ ಮಲ್ಪೆ ಪರ್ಸೀನ್ ಮೀನುಗಾರರ ಸಂಘದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ದೇಶದ ಆರ್ಥಿಕತೆಗೆ ಮೀನುಗಾರಿಕೆ ಉತ್ತಮ ಕೊಡುಗೆ ನೀಡಿದೆ. ಭಾರತದ ಮೀನುಗಾರಿಕೆಯ ರಾಜಧಾನಿ ಎಂದು ಕರೆಯುವಷ್ಟರ ಮಟ್ಟಿಗೆ ಮಲ್ಪೆಯಲ್ಲಿ ಮೀನುಗಾರಿಕೆ ಚಟುವಟಿಕೆ ನಡೆಯುತ್ತವೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ 1,500 ಕೋ. ರೂ. ವೆಚ್ಚದ ಬಂದರು ಹೊರವಲಯ (ಔಟರ್ ಹಾರ್ಬರ್) ಸ್ಥಾಪನೆಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಪರ್ಸೀನ್ ಮೀನುಗಾರರಿಗೆ ಜಾಗ ನೀಡುವ ಕುರಿತ ಪ್ರಸ್ತಾವನೆಯೂ ಇದೆ ಎಂದರು.
ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಬೆಣ್ಣೆಕುದ್ರು ದೇವಸ್ಥಾನದ ಆಡಳಿತ ಮೋಕ್ತೇಸರ ಆನಂದ ಸಿ. ಕುಂದರ್ ಕೋಟ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಶಾಸಕ ಯಶಪಾಲ್ ಸುವರ್ಣ, ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಅವರನ್ನು ಗೌರವಿಸಲಾಯಿತು.
ಮಹಿಳಾ ಹಸಿ ಮೀನು ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್, ಕಾರ್ತಿಕ್ ಬ್ರೂ ಸಂಸ್ಥೆಯ ಹರಿಯಪ್ಪ ಕೋಟ್ಯಾನ್, ಮೀನುಗಾರಿಕೆ ನಿರ್ದೇಶಕ ದಿನೇಶ್ ಕಲ್ಲೇರ, ಒಣಮೀನು ಮಹಿಳಾ ಸಂಘದ ಅಧ್ಯಕ್ಷೆ ಗೀತಾ ಕರ್ಕೇರ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಉದ್ಯಮಿಗಳಾದ ಆನಂದ ಪಿ. ಸುವರ್ಣ, ಭುವನೇಂದ್ರ ಕಿದಿಯೂರು, ಸಾಧು ಸಾಲ್ಯಾನ್, ರಾಮಚಂದ್ರ ಕುಂದರ್, ಅಖಿಲ ಭಾರತೀಯ ಪರ್ಸೀನ್ ಮೀನುಗಾರರ ಸಂಘದ ಗೌರವಾಧ್ಯಕ್ಷ ಬಾಬು, ಭಾರತೀಯ ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ಗುರುದಾಸ್ ಬಂಗೇರ, ಪರ್ಸೀನ್ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಯಶೋಧರ ಅಮೀನ್, ಪರ್ಸೀನ್ ಮೀನುಗಾರರ ಸಂಘದ ಉಪಾಧ್ಯಕ್ಷ ನವೀನ್ ಬಂಗೇರ, ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸ್ ಸುವರ್ಣ ಮೊದಲಾದವರಿದ್ದರು.
ಕ್ರೀಡೋತ್ಸವ
ಪರ್ಸೀನ್ ಮೀನುಗಾರರ ಸಂಘದ ಆವರಣದಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ಮುಂಜಾನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಬೆಳಿಗ್ಗೆ ನಡೆದ ಕ್ರೀಡೋತ್ಸವವನ್ನು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕ ಯಶಪಾಲ್ ಸುವರ್ಣ, ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ ಸುವರ್ಣ, ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸ್. ಸುವರ್ಣ ಸೇರಿದಂತೆ ಹಲವರಿದ್ದರು.