ಪಡುಬಿದ್ರಿ ದೇವಳಕ್ಕೆ ಕಾಪು ಹೊಸ ಮಾರಿಗುಡಿಯಿಂದ ಹೊರೆಕಾಣಿಕೆ

ಲೋಕಬಂಧು ನ್ಯೂಸ್ ಕಾಪು, ಏ.29
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಕಾಪು ಶ್ರೀ ಹೊಸ ಮಾರಿಗುಡಿ ಸನ್ನಿಧಾನದಿಂದ ಏ.26ರಂದು ಬೃಹತ್ ಹೊರೆಕಾಣಿಕೆ ಸಮರ್ಪಿಸಲಾಯಿತು.ದೇವಳದ ವ್ಯವಸ್ಥಾಪನ ಸಮಿತಿ, ಅಭಿವೃದ್ಧಿ ಸಮಿತಿ, ವಿವಿಧ ಸಂಘಸಂಸ್ಥೆಗಳು ಮತ್ತು ಸುತ್ತಮುತ್ತಲಿನ ಗ್ರಾಮದಿಂದ ಹೊರೆಕಾಣಿಕೆ ಸಮರ್ಪಿಸಲಾಯಿತು.


ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಮುಂಭಾಗ ಹೊರೆ ಕಾಣಿಕೆಗೆ ಚಾಲನೆ ನೀಡಲಾಗಿದ್ದು ಹೊರೆಕಾಣಿಕೆಯಲ್ಲಿ ಅಕ್ಕಿ, ಬೆಲ್ಲ, ತೆಂಗಿನಕಾಯಿ, ಹಾಳೆತಟ್ಟೆ, ಸಕ್ಕರೆ, ತರಕಾರಿ, ಫಲವಸ್ತು ಸೇರಿದಂತೆ ಇನ್ನೂ ಅನೇಕ ವಸ್ತುಗಳಿದ್ದವು.


ದೇವಳದ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ ಹೆಗ್ಡೆ ಕಲ್ಯ, ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಾಧವ ಆರ್. ಪಾಲನ್, ಮಾತೃ ವೈಭವ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಧಾರ್ಮಿಕ ಸಮಿತಿ ಪ್ರಧಾನ ಸಂಚಾಲಕ ಕೆ.ಭಗವಾನ್ ದಾಸ್, ಪುಣೆ ಸಮಿತಿ ಪದಾಧಿಕಾರಿಗಳಾದ ಉದಯ ಶೆಟ್ಟಿ ಕಳತ್ತೂರು, ದಿನೇಶ್ ಶೆಟ್ಟಿ ಕಳತ್ತೂರು, ಹೊರೆಕಾಣಿಕೆ ಪ್ರಮುಖರಾದ ಅರುಣ್ ಶೆಟ್ಟಿ ಪಾದೂರು, ಶ್ರೀಕರ ಶೆಟ್ಟಿ ಕಲ್ಯ, ಗೀತಾಂಜಲಿ ಎಂ. ಸುವರ್ಣ, ಶ್ರೀಧರ ಅಮೀನ್ ಮಣಿಪುರ, ರಂಜನ್ ಹೆಗ್ಡೆ, ಅಭಿವೃದ್ಧಿ ಸಮಿತಿ ಗೌರವ ಸಲಹೆಗಾರ ನಿರ್ಮಲ್ ಕುಮಾರ್ ಹೆಗ್ಡೆ, ಸುನಿಲ್ ಎಸ್. ಪೂಜಾರಿ, ಸಾವಿತ್ರಿ ಗಣೇಶ್, ಜಯರಾಮ್ ಆಚಾರ್ಯ, ಪ್ರಭಾತ್ ಶೆಟ್ಟಿ ಮೂಳೂರು ಮೊದಲಾದವರಿದ್ದರು.