ಲೋಕಬಂಧು ನ್ಯೂಸ್ ಪಡುಬಿದ್ರಿ, ಏ.29
ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವೈಭವದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಅನ್ನದಾನಕ್ಕೆ ನೀಡಲ್ಪಡುವ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸಂಚಾಲಕತ್ವದಲ್ಲಿ ಪಡುಬಿದ್ರಿ ಗುಂಡ್ಲಾಡಿ ಕಟ್ಟೆ ಬಳಿ ಆದಿತ್ಯವಾರ ಸಂಜೆ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಡುಬಿದ್ರಿ ದೇಗುಲಕ್ಕೆ ಸಲ್ಲಿಸಲ್ಪಡುವ ಬೃಹತ್ ಹೊರೆಕಾಣಿಕೆ ಮೆರವಣಿಗೆ ಪಡುಬಿದ್ರಿಯಲ್ಲಿ ಹೊಸ ಚರಿತ್ರೆ ನಿರ್ಮಿಸಿದೆ ಎಂದರು.ಪಡುಬಿದ್ರಿ ಸಹಿತ ಕಾಪು ಕ್ಷೇತ್ರದ ಪ್ರತೀ ಗ್ರಾಮಗಳಿಂದ, ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ, ಬೈಂದೂರು, ಕುಂದಾಪುರ, ಪೆರ್ಡೂರು ಮತ್ತು ಹಿರಿಯಡ್ಕ ಹಾಗೂ ದ.ಕ. ಜಿಲ್ಲೆಯ ವಿವಿಧೆಡೆಗಳಿಂದ ಹೊರೆ ಕಾಣಿಕೆ ಆಗಮಿಸಿತ್ತು.
ಕಾಪು ಹೊಸ ಮಾರಿಗುಡಿಯಿಂದ 99 ವಾಹನ, ಡಾ.ಜಿ.ಶಂಕರ್ ನೇತೃತ್ವದ ಮೊಗವೀರ ಮಹಾಜನ ಸಂಘ ಮತ್ತು ಉಚ್ಚಿಲ ಮಹಾಲಕ್ಷ್ಮೀ ಸನ್ನಿಧಾನದಿಂದ ಹೊರೆಕಾಣಿಕೆ, ಪಡುಬಿದ್ರಿ ಬಿಲ್ಲವ ಸಮಾಜ, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪುತ್ತಿಗೆ ಮಠ ಸಹಿತ ಅವಿಭಜಿತ ದ.ಕ. ಜಿಲ್ಲೆಯ ವಿವಿಧ ಸಮಾಜ, ಸಂಘಸಂಸ್ಥೆಗಳಿಂದ ಹೊರೆ ಕಾಣಿಕೆ ಸಮರ್ಪಿತವಾಯಿತು.
ಮೆರವಣಿಗೆಯಲ್ಲಿ ನೂರಾರು ಹೊರೆ ಕಾಣಿಕೆ ತುಂಬಿದ ವಾಹನಗಳು, ಮಹಿಳೆಯರು ಮತ್ತು ಪುರುಷರ ಸರತಿ ಸಾಲು,
ಕುಣಿತ ಭಜನಾ ತಂಡಗಳು, ಟ್ಯಾಬ್ಲೋಗಳು, ವಿಶೇಷ ಬಿರುದಾವಳಿಗಳು, ತಾಲೀಮುಗಳ ಮೆರವಣಿಗೆಗೆ, ಕೆಲವೆಡೆಗಳಲ್ಲಿ ತಂಪು ಒಪಾನೀಯದ ವ್ಯವಸ್ಥೆ ಮೆರುಗು ನೀಡಿತ್ತು.
ಮೆರವಣಿಗೆಯುದ್ದಕ್ಕೂ ನಡೆದ ಸ್ವಚ್ಚತಾ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ, ಆಶಾ ಪ್ರಕಾಶ್ ಶೆಟ್ಟಿ, ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಅದಾನಿ ಸಮೂಹ ಸಂಸ್ಥೆ ಅಧ್ಯಕ್ಷ ಕಿಶೋರ್ ಆಳ್ವ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ವಿಶ್ವ ಹಿಂದೂ ಪರಿಷತ್ ಪ್ರಮುಖ ಡಾ. ಎಂ.ಬಿ. ಪುರಾಣಿಕ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದೇವಳದ ಆನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್, ಪಡುಬಿದ್ರಿ ಬೀಡು ಪೇಟೆಮನೆ ಭವಾನಿ ಶಂಕರ ಹೆಗ್ಡೆ ಮತ್ತು ಕೊರ್ನಾಯ ಶ್ರೀಪತಿ ರಾವ್, ಬ್ರಹ್ಮಕಲಶೋತ್ಸವ ಸಮಿತಿಯ ದ.ಕ. ಜಿಲ್ಲೆಯ ಸಂಚಾಲಕರಾದ ಚಂದ್ರಹಾಸ ಶೆಟ್ಟಿ ಬಂಟ್ವಾಳ, ದಯಾನಂದ ಹೆಜಮಾಡಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ವೈ ಎನ್. ರಾಮಚಂದ್ರ ರಾವ್, ಕೊರ್ನಾಯ ಪದ್ಮನಾಭ ರಾವ್, ವೈ.ಸುಧೀರ್ ಕುಮಾರ್, ಗಣೇಶ್ ಕೋಟ್ಯಾನ್, ಲೋಕೇಶ್ ಶೆಟ್ಟಿ ಬಂಟ್ವಾಳ, ಸಾಂತೂರು ಭಾಸ್ಕರ ಶೆಟ್ಟಿ, ಗಣೇಶ್ ಗುಜರನ್, ಭಾಸ್ಕರ್ ಕೆ., ಬಾಲಾಜಿ ಯೋಗೀಶ್ ಶೆಟ್ಟಿ, ಗೀತಾಂಜಲಿ ಸುವರ್ಣ, ಮಮತಾ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ನವೀನ್ ಚಂದ್ರ ಜೆ. ಶೆಟ್ಟಿ, ವೈ.ಸುಕುಮಾರ್, ಪ್ರಧಾನ ಕಾರ್ಯದರ್ಶಿ ಮುರಳೀನಾಥ ಶೆಟ್ಟಿ, ಪುಚ್ಚೊಟ್ಟು ಬೀಡು ಚಂದ್ರಹಾಸ ಶೆಟ್ಟಿ, ಸಂತೋಷ್ ಶೆಟ್ಟಿ, ಪಲ್ಲವಿ, ಕಲ್ಯ ಶ್ರೀಕರ ಶೆಟ್ಟಿ, ಅರುಣ್ ಶೆಟ್ಟಿ ಪಾದೂರು, ಶರಣ್ ಕುಮಾರ್ ಮಟ್ಟು, ಪ್ರಕಾಶ್ ದೇವಾಡಿಗ, ನವೀನ್ ಎನ್. ಶೆಟ್ಟಿ, ಕೊಳಕೆ ಇರ್ವತ್ತೂರು ಭಾಸ್ಕರ್ ಕೋಟ್ಯಾನ್, ಉದಯ ಕೋಟ್ಯಾನ್, ರಮಾಕಾಂತ ರಾವ್, ನಡಿಕೆರೆ ರತ್ನಾಕರ ಶೆಟ್ಟಿ, ವಿಠಲ ಗುರಿಕಾರ, ಪ್ರಶಾಂತ್ ಶೆಣೈ, ಮಟ್ಟಾರು ರತ್ನಾಕರ ಹೆಗ್ಡೆ, ಶಶಿಕಾಂತ್ ಪಡುಬಿದ್ರಿ, ವಿಶ್ವಾಸ್ ವಿ. ಅಮೀನ್, ಅಶೋಕ್ ಸಾಲ್ಯಾನ್, ಕರುಣಾಕರ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ವಿಶು ಕುಮಾರ್ ಶೆಟ್ಟಿಪಾಲ್, ರಾಜೇಶ್ ಪಡುಬಿದ್ರಿ, ಪೇಟೆಮನೆ ಪ್ರಕಾಶ್ ಶೆಟ್ಟಿ ಮೊದಲಾದವರಿದ್ದರು.
ಪೊಲೀಸ್, ಆರೋಗ್ಯ, ಅಗ್ನಿ ಶಾಮಕ ದಳ ಇಲಾಖೆಗಳು ಸಹಕರಿಸಿದ್ದವು.