ಲೋಕಬಂಧು ನ್ಯೂಸ್ ಪಡುಬಿದ್ರಿ, ಏ.29
ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ನಡೆಯುವ ವೈಭವದ ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆಯಾಗಿ ಉದ್ಯಮಿ ಗಣೇಶ್ ಗುಜರನ್ ನೇತೃತ್ವದಲ್ಲಿ ಸಮಸ್ತ ಬಿಲ್ಲವ ಸಮಾಜದ ವತಿಯಿಂದ 22 ಲಕ್ಷ ರೂ. ಮೌಲ್ಯದ 1,800 ಚೀಲ ಅಕ್ಕಿ ಸಮರ್ಪಿಸಲಾಯಿತು.ದೇವಳದ ವತಿಯಿಂದ ನೀಡಲಾದ ಅನುಗ್ರಹ ಪತ್ರವನ್ನು ಪುಚ್ಚೊಟ್ಟು ಬೀಡು ಚಂದ್ರಹಾಸ ಎಲ್. ಶೆಟ್ಟಿ, ಶ್ರೀನಾಥ್ ಹೆಗ್ಡೆ ನಡ್ಸಾಲ್ ಗುತ್ತು, ನವೀನಚಂದ್ರ ಜೆ. ಶೆಟ್ಟಿ, ಸುಧಾಕರ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು ನೀಡಿದರು.
ಈ ಸಂದರ್ಭದಲ್ಲಿ ರವಿ ಬಿ. ಅಂಚನ್, ನಿಖಿಲ್ ಪೂಜಾರಿ ಕಲ್ಲಟ್ಟೆ, ಪ್ರಶಾಂತ್ ಕುಮಾರ್, ಸುಜಿತ್ ಕುಮಾರ್, ಸಾಧು ಪೂಜಾರಿ, ಲಕ್ಷ್ಮಣ್ ಡಿ. ಪೂಜಾರಿ ಮೊದಲಾದವರಿದ್ದರು.