ಲೋಕಬಂಧು ನ್ಯೂಸ್, ಪಡುಬಿದ್ರಿ, ಏ.29
ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ನೇತೃತ್ವದಲ್ಲಿ ಸುಂದರವಾಗಿ ನಿರ್ಮಾಣವಾಗಿದೆ. ದೇವರಿಗೆ ಸ್ವರ್ಣ ಪಲ್ಲಕಿ, ರಜತ ದ್ವಾರಗಳು ವನದುರ್ಗಾ ಟ್ರಸ್ಟ್‌ನಿಂದ ಸಮರ್ಪಣೆಯಾಗಿರುವುದು ಈಶ್ವರನ ಐಶ್ವರ್ಯವನ್ನೇ ಪ್ರಕಟಿಸಿದೆ ಎಂದು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಏ. 25ರಂದು ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು ಶ್ರೀ ವನದುರ್ಗಾ ಟ್ರಸ್ಟ್ ಮೂಲಕ ದೇವರ ಸನ್ನಿಧಿಗೆ ಸಮರ್ಪಿಸಲ್ಪಟ್ಟ ಚಿನ್ನದ ಪಲ್ಲಕಿ ಹಾಗೂ ರಜತ ದ್ವಾರಗಳ ಸಮರ್ಪಣೆ ಸಮಾರಂಭದಲ್ಲಿ ಶ್ರೀಪಾದರು ಆಶೀರ್ವಚನ ನೀಡಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪಡುಬಿದ್ರಿ ವಿಪ್ರ ಸಮುದಾಯ ಸಮಸ್ತ ಜನತೆಗೆ ಮಾರ್ಗದರ್ಶನ ಮಾಡುತ್ತಿದೆ ಎಂದರು.
ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ, ಜಾನಪದ ವಿದ್ವಾಂಸ ಕೆ. ಎಲ್. ಕುಂಡಂತಾಯ, ಆನುವಂಶಿಕ ಮೊಕೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ್ ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ಮತ್ತು ಕೊರ್ನಾಯ ಶ್ರೀಪತಿ ರಾವ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ವೆಂಕಟೇಶ ಅಡಿಗ, ಕಾರ್ಯನಿರ್ವಹಣಾಧಿಕಾರಿ ಕೆ.ರಾಜಗೋಪಾಲ ಉಪಾಧ್ಯಾಯ, ಶ್ರೀಕ್ಷೇತ್ರದ ತಂತ್ರಿ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಅರ್ಚಕರಾದ ಎಚ್. ಪದ್ಮನಾಭ ಭಟ್, ವೈ. ಗುರುರಾಜ ಆಚಾರ್ಯ, ಮಠತ್ರಾಮ ಗಂಗಾಧರ ರಾವ್, ಸನ್ನಿಧಾನದ ಅರ್ಚಕರಾದ ನಂದಕುಮಾರ್ ಆಚಾರ್ಯ, ರಘುಪತಿ ಆಚಾರ್ಯ, ಗುರುರಾಜ ಆಚಾರ್ಯ, ಪಾತ್ರಿಗಳಾದ ಹರಿನಾರಾಯಣ ರಾವ್, ಸುಬ್ರಹ್ಮಣ್ಯ ರಾವ್, ಗುರಿಕಾರರಾದ ಕೊರ್ನಾಯ ಪದ್ಮನಾಭ ರಾವ್, ನಟರಾಜ ರಾವ್ ಪಿ. ಎಸ್., ಮುರುಡಿ ಜಗದೀಶ ರಾವ್, ಟ್ರಸ್ಟಿಗಳಾದ ಶ್ರೀನಿವಾಸ ರಾವ್, ರಾಘವೇಂದ್ರ ರಾವ್, ಗುರುಪ್ರಸಾದ್ ರಾವ್, ರವೀಂದ್ರ ರಾವ್ ಪಿ. ಎಚ್. ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯದರ್ಶಿ ವೈ. ಎನ್. ರಾಮಚಂದ್ರ ರಾವ್ ಸ್ವಾಗತಿಸಿ, ಗುರುಪ್ರಸಾದ್ ಕನ್ನಂಗಾರ್ ನಿರೂಪಿಸಿದರು.