ಲೋಕಬಂಧು ನ್ಯೂಸ್ | ಉಡುಪಿ, ಏ.8
ಹೇರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 1ರಂದು ನಡೆಯಲಿರುವ ಶತಚಂಡಿಕಾ ಯಾಗದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಬುಧವಾರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಅರ್ಚಕ ಆನಂದ ಭಟ್, ಕಡೆಕಾರು ಶ್ರೀಶ ಭಟ್, ಸುನಿಲ್ ಸೂಡ, ಕರುಣಾಕರ ಶೆಟ್ಟಿ, ರವಿ ಸುವರ್ಣ, ಗಣೇಶ್ ಆಚಾರ್ಯ ಮೊದಲಾದವರಿದ್ದರು.
